ಚಿಕ್ಕಬಳ್ಳಾಪುರ: ವಿಧವೆ ಮಹಿಳೆಯ ಸಹವಾಸ ಮಾಡಿದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ನಗರದ 15ನೇ ವಾರ್ಡ್‌ನ ನಂದಿ ರಸ್ತೆಯಲ್ಲಿ ನಡೆದಿದೆ. ಪ್ರಶಾಂತ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಆತ್ಮಹತ್ಯೆಗೂ ಮುನ್ನ ಪ್ರಶಾಂತ್, ಮೊಬೈಲ್ನಲ್ಲಿ ತಮ್ಮ ಸಾವಿಗೆ ನಗರಸಭೆ ಸದಸ್ಯ ಅಂಬರೀಷ್ ಕಾರಣ ಎಂದು ಹೇಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ನಗರದ 15ನೇ ವಾರ್ಡ್‌ನಲ್ಲಿ ವಾಸವಾಗಿದ್ದ ಸುಮಾ ತನ್ನ ಮನೆಯಲ್ಲೇ ಪ್ರಶಾಂತ್ ಎನ್ನುವವರಿಗೆ ಮನೆ ಬಾಡಿಗೆಗೆ ನೀಡಿದ್ದರು. ಕಳೆದ 2 ವರ್ಷಗಳ ಹಿಂದೆಯಷ್ಟೇ ಸುಮಾ ಪತಿ ರಮೇಶ್ ಕೋವಿಡ್‌ನಿಂದ ಮೃತಪಟ್ಟಿದ್ದರು. ಇದಾದ ಬಳಿಕ ನಗರದಲ್ಲಿ ಸ್ಟಿಕ್ಕರ್ ಕಟ್ಟಿಂಗ್ ಅಂಗಡಿ ಇಟ್ಟುಕೊಂಡಿದ್ದ ಪ್ರಶಾಂತ್, ಸುಮಾ ಅವರ ಮನೆಗೆ ಬಂದು ರೂಂ ಬಾಡಿಗೆ ಪಡೆದು ವಾಸವಾಗಿದ್ದರು. ಈ ವೇಳೆ ಇಬ್ಬರ ನಡುವೆ ಅನ್ಯೋನ್ಯತೆ ಹೆಚ್ಚಾಗಿ ಸುಮಾ ಹಾಗೂ ಪ್ರಶಾಂತ್ ನಡುವೆ ಪ್ರೀತಿ ಚಿಗುರೊಡೆದಿತ್ತು. ಬಳಿಕ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದರು ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಇನ್ನು, ಈ ಕುರಿತು ಪ್ರಶಾಂತ್ ಸಹೋದರಿ ವೀಣಾ ಪ್ರತಿಕ್ರಿಸಿ, ಸುಮಾ ಹಾಗು ಪ್ರಶಾಂತ್ ಇಬ್ಬರು ಪ್ರೀತಿಸಿದ್ದರು. ಅಲ್ಲದೇ ಇಬ್ಬರು ಸಾಕಷ್ಟು ಕಡೆ ಟ್ರಿಪ್ ಹೋಗಿದ್ದಾರೆ. ಕೆಲವು ದಿನಗಳ ಬಳಿಕ ಅಧಿಕೃತವಾಗಿ ಮದುವೆಯಾಗಲು ತಯಾರಿ ನಡೆಸಿದ್ದರು. ಬೇರೆ ಕಡೆ ಮನೆ ಮಾಡಿಕೊಂಡಿದ್ದ ನನ್ನ ತಮ್ಮ ಪ್ರಶಾಂತ್‌ನನ್ನು ಸುಮಾ ಅವರೇ ಖುದ್ದು, ನಮ್ಮ ಮನೆಗೆ ಬಂದು ಇರು ಅಂತಾ ಬಾಡಿಗೆ ನೆಪದಲ್ಲಿ ಇಲ್ಲಿಗೆ ತಂದು ಇರಿಸಿಕೊಂಡಿದ್ದರು. ಅಲ್ಲದೇ ನನ್ನ ತಮ್ಮನ ಸಾವಿಗೆ ಅಂಬರೀಶ್ ಹಾಗೂ ಸುಮಾ ಕಾರಣ ಎಂದು ವೀಣಾ ಆರೋಪಿಸಿದ್ದಾರೆ.
ಇನ್ನು, ಸುಮಾ ಅಂಬರೀಶ್ ಜೊತೆಗೆ ಸಲುಗೆಯಿಂದ ಮಾತನಾಡುತ್ತಿದ್ದರು. ಈ ವಿಚಾರದಲ್ಲಿ ಅಂಬರೀಶ್, ಸುಮಾ, ಪ್ರಶಾಂತ್ ಮಧ್ಯೆ ಗಲಾಟೆ ಆಗಿದೆ ಎನ್ನಲಾಗ್ತಿದ್ದು, ಈ ಹಿನ್ನೆಲೆ ಪ್ರಶಾಂತ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಸುಮಾ ಹಾಗು ಅಂಬರೀಶ್ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: 9ನೇ ಮಹಡಿಯಿಂದ ಹಾರಿ ಪ್ರಾಣ ಬಿಟ್ಟ ಯುವಕ.. ಕಾರಣ ನಿಗೂಢ!