ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಈ ದಿನ ಹೊಸದಾಗಿ 89 ಜನರಿಗೆ ಕೊರೊನಾ ಸೋಂಕು ತಗುಲಿದೆ. 105 ಮಂದಿ ಗುಣಮುಖರಾಗಿದ್ದಾರೆ.
ಇಂದಿನ ಕೋವಿಡ್ ಕೇಸ್ ಗಳ ಮಾಹಿತಿ:
ಚಿಕ್ಕಬಳ್ಳಾಪುರ 15, ಚಿಂತಾಮಣಿ 35, ಗೌರಿಬಿದನೂರು 16, ಬಾಗೇಪಲ್ಲಿ 9, ಗುಡಿಬಂಡೆ 8 ಹಾಗೂ ಶಿಡ್ಲಘಟ್ಟ 6 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5,729ಕ್ಕೆ ಏರಿಕೆಯಾಗಿದೆ.
105 ಮಂದಿ ಗುಣಮುಖ:
ಚಿಂತಾಮಣಿ 10 ಸೋಂಕಿತರು, ಚಿಕ್ಕಬಳ್ಳಾಪುರ 19, ಬಾಗೇಪಲ್ಲಿ 26, ಶಿಡ್ಲಘಟ್ಟ 11, ಗೌರಿಬಿದನೂರು 36 ಹಾಗೂ ಗುಡಿಬಂಡೆ ವ್ಯಾಪ್ತಿಯಲ್ಲಿ 3 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಒಟ್ಟು ಗುಣಮುಖಗೊಂಡವರ ಸಂಖ್ಯೆ 4,725 ಕ್ಕೆ ಏರಿಕೆಯಾಗಿದೆ.
ಮೃತರಿಷ್ಟು:
ಇಂದು ಕೊರೊನಾ ಸೋಂಕಿಗೆ 60 ವರ್ಷದ ವ್ಯಕ್ತಿ ಹಾಗೂ ಚಿಂತಾಮಣಿ 26 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸದ್ಯ 930 ಸಕ್ರಿಯ ಸೋಂಕಿತರಿಗೆ ಜಿಲ್ಲೆಯ ಐಸೊಲೇಷನ್ ಸೇರಿದಂತೆ ತಾಲೂಕಿನ ಕೋವಿಡ್ ಕೇರ್ ಸೆಂಟರ್, ಹೋಂ ಐಸೋಲೇಷನ್ ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.