ಚಾಮರಾಜನಗರ : ಬಿಳಿಗಿರಿರಂಗನ ದರ್ಶನ ಪಡೆಯಲು ಬರುವ ಜನರು ಬೆಟ್ಟದ ತುದಿಯಲ್ಲಿ ನಿಂತು ಫೋಟೋ ಕ್ಲಿಕ್ಕಿಸುವ ಸಾಹಸ ಮಾಡುತ್ತಿದ್ದು ರಭಸದಿಂದ ಬೀಸುವ ಗಾಳಿಗೆ ಸ್ವಲ್ಪ ಆಯ ತಪ್ಪಿದರೂ ಜೀವಕ್ಕೆ ಆಪತ್ತು ಬರುವಂತಾಗಿದೆ.
ದೇವಾಲಯದ ಸುತ್ತಲಿನ ಪ್ರದೇಶ ಕಂದಾಯ ಭೂಮಿಯಾದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿಯೂ ಮಧ್ಯ ಪ್ರವೇಶಿಸುತ್ತಿಲ್ಲ. ದೇಗುಲದ ಸಿಬ್ಬಂದಿ ಯುವ ಜನತೆಯ ಪುಂಡಾಟ ತಿಳಿದರೂ ನಿರ್ಲಕ್ಷ್ಯ ವಹಿಸುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೀಕೆಂಡ್ ಮೋಜಿಗೆ ಬರುವ ಪ್ರವಾಸಿಗರು ಕಾಡಿನ ಮಧ್ಯೆ ವಾಹನ ನಿಲ್ಲಿಸಿ ತಡೆಗೋಡೆ ಮೇಲೆ ನಿಲ್ಲುವುದು ಹೆಚ್ಚಾಗುತ್ತಿದ್ದು ಈ ಕುರಿತು ಅರಣ್ಯ ಇಲಾಖೆ ಕ್ರಮ ವಹಿಸಬೇಕಿದೆ.