ETV Bharat / state

ವಿವಾಹ ನೋಂದಣಿ ಕಚೇರಿ ಸಮೀಪಿಸುತ್ತಿದ್ದಂತೆ ಯುವಕ ಪರಾರಿ.. ಪ್ರೀತಿಸಿದಾಕೆ ಕಂಗಾಲು! - ಮದುವೆಯಾಗುತ್ತೇನೆಂದು ಹೇಳಿ ಕೈಕೊಟ್ಟು ಓಡಿಹೋದ ಯುವಕ

ಹನೂರು ತಾಲೂಕಿನ ಗ್ರಾಮವೊಂದರ 20 ವರ್ಷದ ಯುವತಿ ಮೋಸ ಹೋಗಿದ್ದಾಳೆ. ಪೊನ್ನಾಚಿ ಗ್ರಾಮದ ಪರಂಜ್ಯೋತಿ(25) ಎಂಬ ಯುವಕ ಆಕೆಗೆ ಕೈಕೊಟ್ಟು ಪರಾರಿಯಾಗಿದ್ದಾನೆ.

Young man escaped while going to register office for marriage in Chamrajanagara

author img

By

Published : May 5, 2022, 6:02 PM IST

ಚಾಮರಾಜನಗರ: ಎರಡು ವರ್ಷ ಪ್ರೀತಿಯ ನಾಟಕವಾಡಿ, ಕೊನೆಗೆ ಮದುವೆಯಾಗುವುದಾಗಿ ನಂಬಿಸಿ ಇನ್ನೇನು ನೋಂದಣಾಧಿಕಾರಿ ಕಚೇರಿಗೆ ಬರುವ ಮಾರ್ಗ ಮಧ್ಯದಲ್ಲೇ ಯುವಕ ನಾಪತ್ತೆಯಾಗಿರುವ ಘಟನೆ ಹನೂರು ತಾಲೂಕಿನ ರಾಮಾಪುರದಲ್ಲಿ ಬೆಳಕಿಗೆ ಬಂದಿದೆ.

ಹನೂರು ತಾಲೂಕಿನ ಗ್ರಾಮವೊಂದರ 20 ವರ್ಷದ ಯುವತಿ ಮೋಸ ಹೋಗಿದ್ದಾಳೆ. ಪೊನ್ನಾಚಿ ಗ್ರಾಮದ ಪರಂಜ್ಯೋತಿ(25) ಎಂಬ ಯುವಕ ಯುವತಿಗೆ ಕೈಕೊಟ್ಟು ಪರಾರಿಯಾದ ಪ್ರಿಯಕರ. ಇಬ್ಬರು ಪ್ರೇಮಿಗಳಾಗಿ ಎರಡು ವರ್ಷ ಕಾಲ ಕಳೆದಿದ್ದಾರೆ.

ಮದುವೆಯಾಗು ಎಂದಾಗ ಮೊದಮೊದಲು ಯುವಕ ನಿರಾಕರಿಸಿದ್ದಾನೆ. ಬಳಿಕ ನಡೆದ ಪಂಚಾಯಿತಿಯಲ್ಲಿ ಮದುವೆಯಾಗುವುದಾಗಿ ಒಪ್ಪಿ ವಿವಾಹ ನೋಂದಣಿಗಾಗಿ ರಾಮಾಪುರಕ್ಕೆ ತೆರಳುವ ಮಾರ್ಗ ಮಧ್ಯೆಯೇ ಪರಾರಿಯಾಗಿದ್ದಾನೆ. ಸದ್ಯ ಮೋಸ ಹೋದ ಯುವತಿ ರಾಮಾಪುರ ಪೊಲೀಸ್​​ ಠಾಣೆಗೆ ದೂರು ನೀಡಿದ್ದಾಳೆ.

ಇದನ್ನೂ ಓದಿ: ಪಿಎಸ್ಐ ಸಮವಸ್ತ್ರ ಧರಿಸಿದ್ದ ಕಾನ್​​ಸ್ಟೇಬಲ್‌ ಸಸ್ಪೆಂಡ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.