ETV Bharat / state

‘ಲ್ಯಾಂಡ್ ಆಫ್ ಟೈಗರ್ಸ್’ಗೆ ಸ್ವಾಗತ.. ಚಾಮರಾಜನಗರಕ್ಕೆ ‘ಪವರ್ ಸ್ಟಾರ್’ ವೆಲ್​ಕಮ್ - ಚಾಮರಾಜನಗರದಲ್ಲಿ ಲ್ಯಾಂಡ್ ಆಫ್ ಟೈಗರ್ಸ್ ಯೋಜನೆ

ಚಾಮರಾಜನಗರದಲ್ಲಿ ಪ್ರವಾಸೋದ್ಯಮಕ್ಕಿರುವ ವಿಫುಲ ಅವಕಾಶಗಳನ್ನು ತೆರೆದಿಡುವುದು. ಶ್ರೀಮಂತ ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ವಿಡಿಯೋ ತಯಾರಿಸಿದೆ. ಇದರಲ್ಲಿ ನಟ ಪುನೀತ್ ರಾಜ್ ಕುಮಾರ್ ಕನ್ನಡ ಹಾಗೂ ಇಂಗ್ಲಿಷ್​​​ನಲ್ಲಿ ಜಿಲ್ಲೆಗೆ ಸ್ವಾಗತ ಕೋರಿದ್ದಾರೆ.

chamarajanagar
ಕೋರಿದ್ದಾರೆ.
author img

By

Published : Nov 11, 2020, 3:44 PM IST

ಚಾಮರಾಜನಗರ: ಪ್ರಾಕೃತಿಕ ಸೌಂದರ್ಯವನ್ನು ಬಿಂಬಿಸಲು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಜಿಲ್ಲಾಡಳಿತ ಸಿದ್ಧಪಡಿಸಿರುವ ನಾಲ್ಕು ನಿಮಿಷಗಳ ವಿಡಿಯೋ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರವಾಸೋದ್ಯಮಕ್ಕಿರುವ ವಿಫುಲ ಅವಕಾಶಗಳನ್ನು ತೆರೆದಿಡುವುದು. ಶ್ರೀಮಂತ ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ವಿಡಿಯೋ ರೂಪಿಸಲಾಗಿದ್ದು, ಇದೇ ತಿಂಗಳಿನಲ್ಲಿ ವಿಡಿಯೋ ಅಧಿಕೃತವಾಗಿ ಬಿಡುಗಡೆಯಾಗಲಿದೆ. 20 ರ ಬಳಿಕ ಸಿಎಂ ಯಡಿಯೂರಪ್ಪ ಮಲೆಮಹದೇಶ್ವರ ದೇಗುಲದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗುವ ನಿರೀಕ್ಷೆ ಇದ್ದು, ಅಲ್ಲೇ ಲೋಕಾರ್ಪಣೆಯಾಗಲಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಟ ಪುನೀತ್ ರಾಜಕುಮಾರ್ ಭಾಗಿಯಾಗಲಿದ್ದಾರೆ ಎಂದರು.

‘ಲ್ಯಾಂಡ್ ಆಫ್ ಟೈಗರ್ಸ್’ಗೆ ಸ್ವಾಗತ
‘ಪವರ್’ ಸಂದೇಶ: ‘ಚೆಲುವ ಚಾಮರಾಜನಗರ - ಲ್ಯಾಂಡ್ ಆಫ್ ಟೈಗರ್ಸ್’ ಎಂಬ ಶೀರ್ಷಿಕೆಯಿರುವ 4 ನಿಮಿಷ 18 ಸೆಕೆಂಡ್​ ಇರುವ ವಿಡಿಯೋದಲ್ಲಿ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳನ್ನು ಸೆರೆ ಹಿಡಿಯಲಾಗಿದೆ. ಜೊತೆಗೆ, ನೀಲಗಾರರ ಪದ, ಗೊರವರ ಸಂಗೀತ, ಹಾಡಿ ಮಕ್ಕಳ ಜೀವನ, ಮಹದೇಶ್ವರ- ಮಂಟೇಸ್ವಾಮಿ ಪದಗಳು ದೃಶ್ಯ ಕಾವ್ಯದ ಜೊತೆ ಮೇಳೈಸಿದ್ದು, ನಟ ಪುನೀತ್ ರಾಜ್ ಕುಮಾರ್ ಕನ್ನಡ ಹಾಗೂ ಇಂಗ್ಲಿಷ್​​​ನಲ್ಲಿ ಚಾಮರಾಜನಗರಕ್ಕೆ ಸ್ವಾಗತ ಕೋರಿದ್ದಾರೆ.‘ಚೆಲುವ ಚಾಮರಾಜನಗರ’ ಎಂಬ ಜಿಲ್ಲಾಡಳಿತದ ಯೋಜನೆಗೆ ಪುನೀತ್ ರಾಜ್ ಕುಮಾರ್ ರಾಯಭಾರಿಯೂ ಆಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.