ETV Bharat / state

ನವೀನ್ ಪಾರ್ಥಿವ ಶರೀರ ತರುವಲ್ಲಿ ಕೇಂದ್ರ ಸರ್ಕಾರ ವಿಫಲ: ವಾಟಾಳ್

author img

By

Published : Mar 13, 2022, 6:03 PM IST

ರಾಜ್ಯ ಸರ್ಕಾರದವರು ಮೃತನ ನಿವಾಸಕ್ಕೆ ತೆರಳಿ ಸುಮ್ಮನೆ ಮೊಸಳೆ ಕಣ್ಣೀರು ಹಾಕಿ ಸಾಂತ್ವನ ಹೇಳಿದ್ದಾರೆಯೇ ಹೊರತು ಪಾರ್ಥಿವ ಶರೀರ ತರುವ ಪ್ರಯತ್ನ ಮಾಡಿಲ್ಲ ಎಂದು ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

vatal-nagaraj-outrage-against-central-govt
ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಮಾತನಾಡಿದರು

ಚಾಮರಾಜನಗರ: ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ಮೃತಪಟ್ಟ ವಿದ್ಯಾರ್ಥಿ ನವೀನ್ ಪಾರ್ಥಿವ ಶರೀರವನ್ನು ದೇಶಕ್ಕೆ ತರುವಲ್ಲಿ ಭಾರತ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದವರು ಮೃತನ ನಿವಾಸಕ್ಕೆ ತೆರಳಿ ಸುಮ್ಮನೆ ಮೊಸಳೆ ಕಣ್ಣೀರು ಹಾಕಿ ಸಾಂತ್ವನ ಹೇಳಿದ್ದಾರೆಯೇ ಹೊರತು ಪಾರ್ಥಿವ ಶರೀರ ತರುವ ಪ್ರಯತ್ನ ಮಾಡಿಲ್ಲ. ನವೀನ್ ಪಾರ್ಥಿವ ಶರೀರ ತರುವಂತೆ ಒತ್ತಾಯಿಸಿ ಮಾರ್ಚ್ 18ರಂದು ಹಾವೇರಿ ಜಿಲ್ಲಾಡಳಿತ ಭವನದ ಎದುರು ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ನಂತರ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.

ಉಕ್ರೇನ್​ನಿಂದ ನವೀನ್​ ಪಾರ್ಥಿವ ಶರೀರ ತರುವ ಬಗ್ಗೆ ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸಿಎಂ ಬೊಮ್ಮಾಯಿ ಸಹ ಈ ಕುರಿತಂತೆ ಪ್ರಯತ್ನಗಳು ನಡೆದಿವೆ ಎಂದಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದ ಬಿಳಿಕಲ್ಲು ಗುಡ್ಡ ಕುಸಿತ ಪ್ರಕರಣ ಸಂಬಂಧ ಮಾತನಾಡಿದ ವಾಟಾಳ್​, ಉನ್ನತ ಮಟ್ಟದ ತನಿಖೆ ನಡೆಸಿ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ವಜಾಗೊಳಿಸಬೇಕು. ಜಿಲ್ಲೆಯಲ್ಲಿ ಗಣಿಗಾರಿಕೆಯಿಂದ ದೊಡ್ಡಮಟ್ಟದ ಮಟ್ಟದ ಅನಾಹುತ ನಡೆದಿದೆ. ಆದರೆ, ಯಾವೊಬ್ಬ ಅಧಿಕಾರಿಗಳಿಗೂ ಶಿಕ್ಷೆಯಾಗಲಿಲ್ಲ. ಕ್ವಾರೆಯ ಉಪ ಗುತ್ತಿಗೆದಾರನ ಬಂಧನ ಆಗಿಲ್ಲ. ಇದನ್ನು ನೋಡಿದರೆ ಜಿಲ್ಲಾಡಳಿತ ಪ್ರಕರಣವನ್ನು ಮುಚ್ಚಿ ಹಾಕುವಂತೆ ಕಾಣುತ್ತಿದೆ ಎಂದು‌ ದೂರಿದರು.

ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್​ ಇಲಾಖೆ, ಗುಂಡ್ಲುಪೇಟೆ ತಹಶೀಲ್ದಾರ್​ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಬಂಧಿಸಬೇಕೆಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.

ಓದಿ: ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.