ETV Bharat / state

ಕೊಟ್ಟ ಹಣ ಕೊಡದವರಿಗೆ ಶಿಕ್ಷಿಸು, ನನ್ನ ಗಂಡನ ಆ ಸಂಬಂಧ ಕೆಡಿಸು... ಮಾರಮ್ಮನ ಹುಂಡಿಯಲ್ಲಿ ಭಕ್ತರ ಪತ್ರಗಳು - ಶಿಂಷಾ ಮಾರಮ್ಮನಿಗೆ ಭಕ್ತರ ಹರಕೆ ಪತ್ರಗಳು

ಶಿಂಷಾ ಮಾರಮ್ಮನ ಹುಂಡಿ ಎಣಿಕೆ ವೇಳೆ ಭಕ್ತರ ತರಹೇವಾರಿ ಹರಕೆ ಪತ್ರಗಳು ಕಂಡು ಬಂದಿವೆ.

hundi
hundi
author img

By

Published : Jul 7, 2022, 6:47 PM IST

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಸಮೂಹ ದೇವಾಲಯಗಳಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ ವೇಳೆ ಶಿಂಷಾ ಮಾರಮ್ಮನಿಗೆ ಭಕ್ತರು ಬರೆದಿರುವ ತರಹೇವಾರಿ ಬೇಡಿಕೆ ಪತ್ರಗಳು ಸಿಕ್ಕಿವೆ. ಮಹಿಳೆಯರು ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಪತ್ರ ಬರೆದು ಹುಂಡಿಯಲ್ಲಿ ಹಾಕಿರುವ ಕೆಲವು ಪತ್ರಗಳು ಕಂಡು ಬಂದಿದ್ದರೆ, ಇನ್ನೂ, ಕೆಲವು ಪತ್ರಗಳಲ್ಲಿ ಉದ್ದದ ಪಟ್ಟಿಯನ್ನೇ ದೇವಿಗೆ ಭಕ್ತರು ಅರ್ಪಿಸಿದ್ದಾರೆ.

ಮಾರಮ್ಮನ ಹುಂಡಿಯಲ್ಲಿ ಭಕ್ತರು ಪತ್ರಗಳು
ಮಾರಮ್ಮನ ಹುಂಡಿಯಲ್ಲಿ ಭಕ್ತರು ಪತ್ರಗಳು

ಭಕ್ತೆಯೊಬ್ಬರು ತಮ್ಮ ಪತ್ರದಲ್ಲಿ 'ತಾಯಿ ನನ್ನವ್ವ ನನ್ನಿಂದ ಹಣ ಪಡೆದವರಿಂದ ಹಣ ಕೊಡಿಸು, ತಿಂಗಳಲ್ಲಿ ಅವರು ನನಗೆ ಹಣ ಹಿಂತಿರುಗಿಸುವಂತೆ ಬುದ್ಧಿ ಕೊಡು' ಎಂದು ಸಾಲಗಾರರ ಹೆಸರು ಬರೆದು ಹರಕೆ ಕಟ್ಟಿಕೊಂಡಿದ್ದಾರೆ. ಜೊತೆಗೆ ನನ್ನ ಹಣ ನನಗೆ ಕೊಡದಿದ್ದರೆ ಅವರಿಗೆ ಕಷ್ಟ ಕೊಡು ಎಂದು ಕೂಡ ಶಾಪ ಹಾಕಿರುವುದು ಪತ್ರದಲ್ಲಿದೆ.

ಮಾರಮ್ಮನ ಹುಂಡಿಯಲ್ಲಿ ಭಕ್ತರು ಪತ್ರಗಳು
ಮಾರಮ್ಮನ ಹುಂಡಿಯಲ್ಲಿ ಭಕ್ತರು ಪತ್ರಗಳು

ಇನ್ನು, ಮತ್ತೋರ್ವ ಮಹಿಳೆ ತನ್ನ ಗಂಡ ತನ್ನೊಟ್ಟಿಗೆ ಇರುವಂತೆ ಮಾಡು, ಆ ಮಹಿಳೆ ಜೊತೆ ಸಂಬಂಧ ಇಲ್ಲದಂತೆ ಮಾಡು, ನಾನು ನನ್ನ ಗಂಡ, ಮಕ್ಕಳು ಚೆನ್ನಾಗಿರಬೇಕು, ನಿನಗೆ ಮರಿಯೊಂದನ್ನು ಬಲಿ ಕೊಡುತ್ತೇನೆ ಎಂದು ಕೇಳಿಕೊಂಡಿದ್ದಾರೆ.

ಮಾರಮ್ಮನ ಹುಂಡಿಯಲ್ಲಿ ಭಕ್ತರು ಪತ್ರಗಳು
ಮಾರಮ್ಮನ ಹುಂಡಿಯಲ್ಲಿ ಭಕ್ತರು ಪತ್ರಗಳು

ಇನ್ನೊಬ್ಬರು ಭಕ್ತರು ತನಗೆ ಇನ್ನೂ 20 ವರ್ಷ ಹೆಚ್ಚಿನ ಆಯಸ್ಸು ಕೊಡು, ಅಂಗನವಾಡಿ ಕೆಲಸ ಖಾಯಂ ಮಾಡು ಎಂದು ಕೇಳಿಕೊಂಡಿದ್ದಾರೆ. ಕನ್ನಡದಲ್ಲಿ ಅಷ್ಟೇ ಅಲ್ಲ ಇಂಗ್ಲಿಷ್​​ನಲ್ಲೂ ಹರಕೆ ಪತ್ರಗಳು ಬಂದಿರುವುದನ್ನು ನೋಡಿ ಸಿಬ್ಬಂದಿ ಅಚ್ಚರಿಗೊಂಡಿದ್ದಾರೆ.

(ಇದನ್ನೂ ಓದಿ: ದಾಖಲೆ ಬರೆದ ತಿರುಪತಿ ವೆಂಕಟೇಶ್ವರ.. ಒಂದೇ ದಿನ ದಾಖಲೆಯ ₹6 ಕೋಟಿ ದೇಣಿಗೆ ಸಂಗ್ರಹ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.