ಕೊಳ್ಳೇಗಾಲ: ನಿನ್ನೆ ಸಿಎಂ ಸ್ಪಷ್ಟಪಡಿಸಿದ್ದಾರೆ. ನಾನೊಬ್ಬ ಪಕ್ಷದ ಶಿಸ್ತಿನ ಕಾರ್ಯಕರ್ತ, ಪಕ್ಷ ಏನು ಆದೇಶ ನೀಡುತ್ತದೋ ಆ ರೀತಿ ಕಾರ್ಯನಿರ್ವಹಿಸಲು ಸಿದ್ಧ ಎಂದ ಅವರು, ಸಿಎಂ ಬದಲಾವಣೆ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾತನಾಡಲು ನಿರಾಕರಿಸಿದರು.
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕ ಉದ್ಘಾಟನೆ ಮಾಡಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಬಿಜೆಪಿ ಪಕ್ಷದ ದೊಡ್ಡ ನಾಯಕರು, ಪಕ್ಷ ಬೆಳೆಯಲು ಅವರ ಕೊಡುಗೆ ಅಪಾರ. ರೈತ ನಾಯಕನಾಗಿ ಹೋರಾಟ, ಪಾದಯಾತ್ರೆ ಮಾಡಿದ್ದನ್ನು ನಾನು ಆ ದಿನಗಳಿಂದಲೂ ನೋಡಿದ್ದೇನೆ. ಹಾಗಾಗಿ ಸ್ವತಃ ಬಿಎಸ್ವೈ ಅವರೇ ಹೈಕಮಾಂಡ್ ಆದೇಶದಂತೆ ಕಾರ್ಯನಿರ್ವಹಿಸಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ ಎಂದರು.
ಇದಕ್ಕೂ ಮುನ್ನ ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ 82 ಲಕ್ಷ ರೂ.ವೆಚ್ಚದ ಹೈಟೆಕ್ ಆಕ್ಸಿಜನ್ ಘಟಕವನ್ನು ಸಚಿವರು, ಶಾಸಕರ ಜೊತೆ ಸೇರಿ ಉದ್ಘಾಟಿಸಿದರು. ಈ ವೇಳೆ, ಎನ್.ಮಹೇಶ್, ಸಿ.ಎಸ್.ನಿರಂಜನ್ ಕುಮಾರ್ ಹಾಗೂ KIRDL ಅಧ್ಯಕ್ಷ ರುದ್ರೇಶ್ ಹಾಜರಿದ್ದರು.