ಕೊಳ್ಳೇಗಾಲ: ಪಟ್ಟಣದ ನಿಸರ್ಗ ವಿದ್ಯಾನಿಕೇತನ ಶಾಲೆಯಲ್ಲಿ ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಕೊಳ್ಳೇಗಾಲ ಪಟ್ಟಣದ ಸಾಯಿಬಾಬಾ ಬಡಾವಣೆ ನಿವಾಸಿಯಾಗಿರುವ ಹನೂರು ಕಾಲೇಜಿನ ಕ್ರಿಸ್ತರಾಜ ಶಾಲೆಯ ಶಿಕ್ಷಕ ಸಂತೋಷ್ ಎಂಬುವವರ ಪುತ್ರಿ ಸಮನ್ವಿತ ಮೃತ ಬಾಲಕಿ. ಸಮನ್ವಿತ ಓದಿನಲ್ಲಿ ಸದಾ ಮುಂದಿದ್ದು, ಶಾಲೆಯ ಟಾಪರ್ ಕೂಡ ಆಗಿದ್ದಳಂತೆ. ಇತ್ತೀಚೆಗೆ ನಡೆಸಲಾಗಿದ್ದ ಪೂರ್ವಭಾವಿ ಪರೀಕ್ಷೆಯಲ್ಲಿ ಸಮನ್ವಿತಾಳಿಗೆ ನಿರೀಕ್ಷಿತ ಅಂಕ ಬಾರದಿರುವುದು ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.
ವಿಷಯ ತಿಳಿದು ನಿಸರ್ಗ ವಿದ್ಯಾರ್ಥಿನಿಕೇತನ ಶಾಲೆ ಆಡಳಿತ ವರ್ಗ, ಮೃತ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ ಪಾಲಕರಿಗೆ ಸಾಂತ್ವನ ಹೇಳಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.
ಇದನ್ನೂ ಓದಿ: ಈತ ಆಧುನಿಕ ಕುಂಭಕರ್ಣ: ವರ್ಷದಲ್ಲಿ 300 ದಿನ ಮಲಗೇ ಇರ್ತಾನೆ..!