ಕೊಳ್ಳೇಗಾಲ (ಚಾಮರಾಜನಗರ): ಕೊರೊನಾ ಸಂದರ್ಭದಲ್ಲಿ ರಾಜ್ಯದಲ್ಲಿನ ಎಲ್ಲ ದುಡಿಯುವ ವರ್ಗಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಅದೇ ರೀತಿ ತಾಲೂಕು ವರದಿಗಾರರು ಹಾಗೂ ಪತ್ರಿಕಾ ವಿತರಕರಿಗೂ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಮುಖ್ಯ ಮಂತ್ರಿ ಯಡಿಯೂರಪ್ಪಗೆ ಶಾಸಕ ಎನ್.ಮಹೇಶ್ ಒತ್ತಾಯ ಮಾಡಿದ್ದಾರೆ. ನಗರದ ಭೀಮಾನಗರದ ನಿವಾಸಿಯಾದ ಪತ್ರಕರ್ತ ನಾಗರಾಜು ನಿವಾಸಕ್ಕೆ ಭೇಟಿ ಕೊಟ್ಟು ಕುಟುಂಬದವರಿಗೆ ಸಾಂತ್ವನ ಹೇಳಿ ಅವರು ಮಾತನಾಡಿದರು.
ಪತ್ರಕರ್ತರನ್ನು ಸರ್ಕಾರ ಫ್ರಂಟ್ ಲೈನ್ ವಾರಿಯರ್ಸ್ ಎಂದು ಪರಿಗಣಿಸಿ ಲಸಿಕೆಗೆ ಮಾತ್ರ ಅವಕಾಶ ನೀಡಿದ್ದು, ಯಾವುದೇ ನೆರವಿನ ಪ್ಯಾಕೇಜ್ ಘೋಷಣೆ ಮಾಡಿಲ್ಲ. ರಾಜ್ಯಾದ್ಯಂತ ತಾಲೂಕು ಮಟ್ಟದಲ್ಲಿ ಸುಮಾರು 15 ಸಾವಿರ ಪತ್ರಕರ್ತರಿದ್ದು, ದುಡಿಮೆಯ ಆದಾಯ ತೀರಾ ಕಡಿಮೆಯಾಗಿದೆ. ಆದ್ದರಿಂದ ಸರ್ಕಾರ ಪತ್ರಕರ್ತರಿಗೆ ಆರ್ಥಿಕ ನೆರವಿನ ಘೋಷಣೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಕೋವಿಡ್ಗೆ ಬಲಿಯಾದ ಪತ್ರಕರ್ತ:
ಕೊರೊನಾ ತಗುಲಿ ಸಾವನ್ನಪ್ಪಿದ್ದ ಪತ್ರಕರ್ತ ನಾಗರಾಜು ಅವರ ಮನೆಗೆ ಭೇಟಿ ನೀಡಿದ ಎನ್.ಮಹೇಶ್ ಶಾಸಕ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ತಾಲೂಕು ಭ್ರಷ್ಟರ ಬೇಟೆ ಪತ್ರಿಕಾ ವರಿದಿಗಾರರಾಗಿದ್ದ ನಾಗರಾಜು ಕೊರೊನಾದಿಂದ ಮೃತಪಟ್ಟಿದ್ದರು.
![special package should be announced to journalists says mla n mahesh](https://etvbharatimages.akamaized.net/etvbharat/prod-images/kn-cnr-kollegal-nmahesh-othaya-av-avb-kac10017_26062021152221_2606f_1624701141_118.jpg)
![special package should be announced to journalists says mla n mahesh](https://etvbharatimages.akamaized.net/etvbharat/prod-images/kn-cnr-kollegal-nmahesh-othaya-av-avb-kac10017_26062021152221_2606f_1624701141_704.jpg)
ನಾಗರಾಜು ಒಬ್ಬ ಪ್ರತಿಭಾನ್ವಿತ ಪತ್ರಕರ್ತನಾಗಿದ್ದು, ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈ ಹಿನ್ನಲೆ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಮನೆಗೆ ಭೇಟಿ ನೀಡಿದ್ದೇನೆ. ಅವರ ಸಮಸ್ಯೆಗಳನ್ನು ಆಲಿಸಿದ್ದೇನೆ. ಸದ್ಯಕ್ಕೆ ಕೈಲಾದ ಸಹಾಯ ಮಾಡಿದ್ದೇನೆ. ಮುಂದೆ ನಾಗರಾಜು ಅವರ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತೇನೆ ಎಂದು ಎನ್.ಮಹೇಶ್ ತಿಳಿಸಿದರು.