ಚಾಮರಾಜನಗರ: ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದ ಎರಡು ರಣಹದ್ದುಗಳಿಗೆ ಎಸ್ಪಿ ದಿವ್ಯಾ ಸಾರಾ ಥಾಮಸ್ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಎಸ್ಪಿ ಅವರು ನಿವಾಸಕ್ಕೆ ತೆರಳುವ ವೇಳೆ ರಸ್ತೆಯಲ್ಲಿ ವಿದ್ಯುತ್ ಸ್ಪರ್ಶದಿಂದ ಎರಡು ರಣಹದ್ದುಗಳು ನೆಲದಲ್ಲಿ ಬಿದ್ದು ನರಳಾಡುತ್ತಿದ್ದವು. ಇದನ್ನು ಗಮನಿಸಿದ ಎಸ್ಪಿ, ತಮ್ಮ ವಾಹನದಲ್ಲಿದ್ದ ಗನ್ ಮ್ಯಾನ್ ಸಹಾಯದೊಂದಿಗೆ ರಣ ಹದ್ದುಗಳಿಗೆ ಪಶುವೈದ್ಯರ ಮೂಲಕ ಚಿಕಿತ್ಸೆ ಕೊಡಿಸಿದ್ದಾರೆ.
![ಎಸ್ಪಿ ಅವರು ರಕ್ಷಿಸಿದ ರಣಹದ್ದುಗಳು](https://etvbharatimages.akamaized.net/etvbharat/prod-images/03:23:10:1600249990_kn-cnr-03-ranahaddu-av-7202614_16092020151621_1609f_1600249581_1015.jpg)
ಚಿಕಿತ್ಸೆ ಬಳಿಕ ಚೇತರಿಸಿಕೊಂಡ ರಣಹದ್ದುಗಳ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಚಿಕಿತ್ಸಾ ವೆಚ್ಚವನ್ನು ಎಸ್ಪಿ ಅವರೇ ಭರಿಸಿದ್ದು ಅವರ ಪಕ್ಷಿ ಪ್ರೀತಿಗೆ ಶ್ಲಾಘನೆ ವ್ಯಕ್ತವಾಗಿದೆ. ಸದ್ಯ ಎಸ್ಪಿ ಅವರ ನಿವಾಸದಲ್ಲೇ ಹದ್ದುಗಳು ಇವೆ ಎಂದು ತಿಳಿದು ಬಂದಿದೆ.