ಚಾಮರಾಜನಗರ: ಏಕಾಂಗಿಯಾಗಿ ಬೈಕ್ ಸವಾರಿ ಮೂಲಕ ಮಣ್ಣು ಉಳಿಸಿ ಅಭಿಯಾನ ನಡೆಸಿದ ಆಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವ್ ಅವರ ಕಾರ್ಯಕ್ರಮ ಇಂದು ಸಂಪನ್ನಗೊಂಡಿದೆ. ಅವರು ಚಾಮರಾಜನಗರ ಮೂಲಕ ಕೊಯಮತ್ತೂರಿನ ಈಶ ಕೇಂದ್ರಕ್ಕೆ ತೆರಳಿದ್ದಾರೆ.
ಕರ್ನಾಟಕದ ಕೊನೆಯ “ಮಣ್ಣು ಉಳಿಸಿ” ಕಾರ್ಯಕ್ರಮವು ಭಾನುವಾರ ಮೈಸೂರಿನಲ್ಲಿ ಜರುಗಿತ್ತು. ಇಂದು ಚಾಮರಾಜನಗರ ಮೂಲಕ ಸದ್ಗುರು ಕೊಯಮತ್ತೂರಿನ ಈಶ ಕೇಂದ್ರಕ್ಕೆ ತೆರಳಿದರು. ಕಳೆದ ಮಾರ್ಚ್ 21 ರಂದು ಆರಂಭಗೊಂಡ ಇವರ ಬೈಕ್ ಯಾತ್ರೆ ಯುರೋಪ್, ಮಧ್ಯ ಏಷ್ಯಾ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಸಾಗಿತ್ತು. ಅಲ್ಲಿ ಮಣ್ಣಿನ ಸತ್ವ ಉಳಿಸುವ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಸದ್ಗುರು ಅವರನ್ನು ಬರಮಾಡಿಕೊಳ್ಳಲು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮುಂಭಾಗ ನೂರಾರು ಮಂದಿ ಎರಡು ತಾಸು ಕಾದಿದ್ದರು. ಆದ್ರೆ ಸದ್ಗುರು ಅಲ್ಲಿ ನೆರದಿದ್ದವರತ್ತ ಕೈ ಬೀಸಿ, ಬೈಕ್ ನಿಲ್ಲಿಸದೇ ಮಿಂಚಿನಂತೆ ತೆರಳಿದ್ದರಿಂದ ಜನರು ನಿರಾಸೆಗೊಳಗಾದರು.
ಇದನ್ನೂ ಓದಿ: ಯೋಗ ಜೊತೆ ಪ್ರವಾಸೋದ್ಯಮ ವರ್ಷ ಆಚರಣೆಗೆ ಯೋಜನೆ: ಶಾಸಕ ರಾಮದಾಸ್