ಕೊಳ್ಳೇಗಾಲ(ಚಾಮರಾಜನಗರ): ರಂಜಾನ್ ಹಬ್ಬದ ದಿನವೇ ಎರಡು ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟಿದ್ದು, ಕೊಳ್ಳೇಗಾಲ ಪಟ್ಟಣದಲ್ಲಿ ಮಾರಾಮಾರಿ ನಡೆದಿದೆ. ನಗರದ ಸಾಮಂದಗೇರಿ ಬೀದಿಯ ನಿವಾಸಿ ನಾಸೀರ್ ಷರೀಫ್ (ಬಬ್ಲು) ಹಾಗೂ ಕಿಜರ್ ಬೆಂಬಲಿಗರ ನಡುವೆ ಗಲಾಟೆಯಾದ ಪರಿಣಾಮ 12 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಬ್ಬದ ಹಿನ್ನೆಲೆ ಮಸೀದಿಗೆ ತೆರಳಿ ಪ್ರಾರ್ಥನೆ ಮುಗಿಸಿ ಬಂದು ಮನೆಗೆ ಹಿಂದಿರುಗುವಾಗ ಹಬ್ಬದಲ್ಲಿ ರಾಜಕೀಯ ವ್ಯಕ್ತಿಗಳು ಭಾಗಿಯಾದ ಶಂಕೆ ಹಿನ್ನೆಲೆ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ್ದು, ಸಾಮಂದೇರಿ ಬೀದಿಯ ಎರಡು ಗುಂಪಿನ ಯುವಕರು ಇಟ್ಟಿಗೆ, ಕಲ್ಲು ದೊಣ್ಣೆಯಿಂದ ಬಡಿದಾಡಿಕೊಂಡಿದ್ದಾರೆ. ಗಲಾಟೆ ಗುಂಪನ್ನು ನೋಡಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಹೊಡೆದಾಟದಲ್ಲಿ ತೊಡಗಿದ್ದವರನ್ನು ಚದುರಿಸಿದ್ದಾರೆ. ಬಡಿದಾಟದಲ್ಲಿ ಪೆಟ್ಟು ತಿಂದು ಕಿಜರ್ ಹಾಗೂ ನಾಸೀರ್ ಷರೀಫ್ ಸೇರಿದಂತೆ 12 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ಸೆಮಿ ಕಂಡಕ್ಟರ್ ಘಟಕ ಸ್ಥಾಪನೆಗೆ ಅನುಮೋದನೆ : ಇದರ ಉಪಯೋಗಗಳೇನು ?
ಕೆಲ ಮುಸ್ಲಿಂ ಯುವಕರು ನ್ಯಾಯಬೇಕೆಂದು ಒತ್ತಾಯಿಸಿ ಆಸ್ಪತ್ರೆ ಆವರಣದಲ್ಲಿ ಧರಣಿ ಕೂರಲು ಮುಂದಾದ ವೇಳೆ ಪಿ.ಎಸ್.ಐ ಚೇತನ್ ಮಧ್ಯ ಪ್ರವೇಶಿಸಿ ಯುವಕರನ್ನು ಮನವೊಲಿಸಿದ್ದು, ತಪ್ಪಿತಸ್ಥರನ್ನು ಕಾನೂನು ರೀತಿ ಶಿಕ್ಷೆಗೆ ಒಳಪಡಿಸೋಣ ಎಂದಿದ್ದಾರೆ.