ಚಾಮರಾಜನಗರ: ಪೊಲೀಸ್ ಪೇದೆಗೆ ಈ ಹಿಂದೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಪೇದೆಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 38 ಮಂದಿಯಲ್ಲಿ 14 ಮಂದಿ ಸಂಬಂಧಿಕರನ್ನು ಕ್ವಾರಂಟೈನ್ನಿಂದ ಇಂದು ಮನೆಗೆ ಕಳುಹಿಸಲಾಗಿದೆ.
ಪೇದೆಯ ವರದಿ ನೆಗೆಟಿವ್ ಎಂದು ಬರುವ ಮುನ್ನ 38 ಮಂದಿಯ ಗಂಟಲು ದ್ರವ, ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರಲ್ಲಿ, 14 ಮಂದಿಯ ವರದಿ ಬಂದಿದ್ದು, ಎಲ್ಲರದ್ದೂ ನೆಗೆಟಿವ್ ರಿಪೋರ್ಟ್ ಬಂದಿದೆ. ಇವರನ್ನು ಕೆಎಸ್ಆರ್ಟಿಸಿ ಮೂಲಕ ಇಂದು ಹನೂರು ತಾಲೂಕಿನ ಬೆಳ್ತೂರು ಗ್ರಾಮಕ್ಕೆ ಕಳುಹಿಸಲಾಗಿದೆ.
ಉಳಿದ 24 ಮಂದಿಯ ವರದಿ ನಿರೀಕ್ಷಿಸುತ್ತಿದ್ದು, ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇವರಲ್ಲಿ ಚೆಕ್ ಪೋಸ್ಟ್ ಸಿಬ್ಬಂದಿಯಾದ ಪೊಲೀಸರು, ಕಂದಾಯ ಇಲಾಖೆ ನೌಕರರು ಇದ್ದಾರೆ.