ETV Bharat / state

ಇತ್ಯರ್ಥವಾಗದ ರೀಲರ್ಸ್ ಸಮಸ್ಯೆ: ರೇಷ್ಮೆ ಮಾರುಕಟ್ಟೆ ಅಧಿಕಾರಿ ವಿರುದ್ಧ ಆಕ್ರೋಶ - Problem with Realors

ಕೊಳ್ಳೇಗಾಲದ ರೇಷ್ಮೆ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡು ಮಾರಾಟ ವಹಿವಾಟು ಸಂಪೂರ್ಣ ಏರುಪೇರಾಗಿದೆ. ಇಲ್ಲಿನ ರೀಲರ್ಸ್​ಗಳ ಸಮಸ್ಯೆಯನ್ನು ಬಗೆಹರಿಸದೇ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ರೀಲರ್ಸ್​ಗಳು ದೂರುತ್ತಿದ್ದು, ಇಲ್ಲಿನ ಮಾರುಕಟ್ಟೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Realors Problem Outrage Against Silk Market Officer at Kollegala
ಇತ್ಯರ್ಥವಾಗದ ರೀಲರ್ಸ್ ಸಮಸ್ಯೆ: ರೇಷ್ಮೆ ಮಾರುಕಟ್ಟೆ ಅಧಿಕಾರಿ ವಿರುದ್ಧ ಆಕ್ರೋಶ
author img

By

Published : May 18, 2020, 6:33 PM IST

ಕೊಳ್ಳೇಗಾಲ(ಚಾಮರಾಜನಗರ): ರೇಷ್ಮೆ ಮಾರುಕಟ್ಟೆಯ ರೀಲರ್ಸ್ ಹಾಗೂ ಅಲ್ಲಿನ ಅಧಿಕಾರಿಗಳ ನಡುವೆ ಕಳೆದ ಎರಡು ತಿಂಗಳಿನಿಂದ ಮುಸುಕಿನ ಗುದ್ದಾಟ ನಡೆಯುತ್ತಿದೆ. ರೇಷ್ಮೆ ಖರೀದಿ ವಿಚಾರದಲ್ಲಿ ರೀಲರ್ಸ್​​ಗಳಿಗಿರುವ ಸಮಸ್ಯೆ ಬಗೆಹರಿಸದ ಅಧಿಕಾರಿಗಳು, ಸ್ವತಃ ಅಕ್ರಮವಾಗಿ ಕೆಲವು ದಲ್ಲಾಳಿಗಳ ಮೂಲಕ ಗೂಡು ಖರೀದಿ ಮಾಡಿಸುತ್ತಿದ್ದಾರೆ ಎಂದು ರೀಲರ್ಸ್​ಗಳು ಗಂಭೀರ ಆರೋಪ ಮಾಡಿದ್ದಾರೆ.

ಇತ್ಯರ್ಥವಾಗದ ರೀಲರ್ಸ್ ಸಮಸ್ಯೆ: ರೇಷ್ಮೆ ಮಾರುಕಟ್ಟೆ ಅಧಿಕಾರಿ ವಿರುದ್ಧ ಆಕ್ರೋಶ

ಕಳೆದ ಎರಡು ದಿನಗಳಿಂದ ಮಾರುಕಟ್ಟೆಗೆ ಬರುವ ಗೂಡು ಖರೀದಿಯಲ್ಲಿ ಹೊರಗುಳಿದಿರುವ ರೀಲರ್ಸ್​​ಗಳು, ನಮ್ಮಲ್ಲಿ ತಯಾರಿಸಿ ಇಟ್ಟುಕೊಂಡಿರುವ ರೇಷ್ಮೆಯನ್ನು ಬೆಂಬಲ ಬೆಲೆಗೆ ಖರೀದಿಸಲು ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಒತ್ತಾಯಿಸಿದರು ಯಾವುದೇ ಪ್ರಯೋಜ‌ನವಾಗಿಲ್ಲ ಎಂದು ದೂರಿದರು.

ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ಈ ಬಗ್ಗೆ ಸರಿಯಾದ ಕ್ರಮವಹಿಸದೇ ರೀಲರ್ಸ್​​ಗಳನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ಇಲ್ಲಿನ ಮಾರುಕಟ್ಟೆ ಉಪ ನಿರ್ದೇಶಕ ರಾಚಪ್ಪ ಎಂಬುವವರನ್ನು ರೀಲರ್ಸ್​ಗಳು ಸುತ್ತುವರೆದು ತರಾಟೆಗೆ ತೆಗೆದುಕೊಂಡಿದ್ದಾರೆ. ರೀಲರ್ಸ್​ಗಳ ಮಧ್ಯ ಒಡಕು ಮೂಡಿಸಿ ಮಾರುಕಟ್ಟೆಯಲ್ಲಿ ತಮಗೆ ತಿಳಿದಿರುವವರಿಂದ ಅಕ್ರಮವಾಗಿ ಗೂಡು ಖರೀದಿ ಮಾಡಿಸುತ್ತಿದ್ದಾರೆ. ಇದರಿಂದ ನಿಜವಾದ ರೀಲರ್ಸ್​ಗಳಿಗೆ ಅನ್ಯಾಯವಾಗುತ್ತಿದೆ. ಇದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡುತ್ತಿದೆ ಎಂದು ‌ಮಾರುಕಟ್ಟೆ ಸಲಹಾ ಸಮಿತಿ ಸದಸ್ಯ ಶ್ರೀಧರ್ ಆರೋಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.