ಚಾಮರಾಜನಗರ: ಲಾಕ್ಡೌನ್ನಲ್ಲಿ ಎಣ್ಣೆ ಸಿಗದೆ ಕುಡಕರು ಚಡಪಡಿಸುತ್ತಿದ್ದರೆ ಮೂಷಿಕಗಳು ಎಣ್ಣೆ ಹೊಡೆದು ಕಿಕ್ಕೇರಿಸಿಕೊಂಡಿರುವ ಘಟನೆ ಕೊಳ್ಳೇಗಾಲದ ಸುರೇಶ್ ಬಾರ್ನಲ್ಲಿ ನಡೆದಿದೆ.
ಬಾಗಿಲಿನ ಸಂದಿಯಿಂದ ಹರಿದು ಬರುತ್ತಿದ್ದ ಬ್ರಾಂದಿ, ವಿಸ್ಕಿಯನ್ನು ಕಂಡು ಬಾರ್ ಮಾಲೀಕ ಅಬಕಾರಿ ಇಲಾಖೆಗೆ ಮಾಹಿತಿ ನೀಡಿ ಅವರಿಂದಲೇ ಸೀಲ್ ಆಗಿದ್ದ ಬಾಗಿಲನ್ನು ತೆರೆಸಿದಾಗ ಇಲಿಗಳ ಕರಾಮತ್ತು ಬೆಳಕಿಗೆ ಬಂದಿದೆ.
ಲಾಕ್ಡೌನ್ನಿಂದ ಬಾರ್ ಬಂದ್ ಆಗಿದ್ದರಿಂದ ಧೈರ್ಯವಾಗಿ ಇಲಿಗಳ ಹಿಂಡು 3 ಕೇಸಿನಷ್ಟು ಮದ್ಯದ ಬಾಟಲ್ಗಳನ್ನು ತುಂಡರಿಸಿ ಅವಾಂತರಗೊಳಿಸಿವೆ ಎನ್ನಲಾಗ್ತಿದೆ. ಕೊನೆಗೆ, ಒಡೆದು ಹೋದ ಬಾಟಲ್ಗಳನ್ನು ಬಿಸಾಡಿ ಬಾರ್ ಬಾಗಿಲನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತೆ ಬಂದ್ ಮಾಡಿದ್ದಾರೆ.