ಚಾಮರಾಜನಗರ: ಭಾರತ್ ಜೋಡೋ ಯಾತ್ರೆಯ ನಡುವೆ ರಾಹುಲ್ ಗಾಂಧಿ ಗುಂಡ್ಲುಪೇಟೆ ಹೊರವಲಯದ ವೀರನಪುರ ಕ್ರಾಸಿನಲ್ಲಿ ಸೋಲಿಗರು ಮತ್ತು ಆಮ್ಲಜನಕ ದುರಂತ ಸಂತ್ರಸ್ತ ಕುಟುಂಬದ ಜೊತೆಗೆ ಸಂವಾದ ನಡೆಸಿದರು.
ಬಿಳಿಗಿರಿರಂಗನ ಬೆಟ್ಟದ ಮುತ್ತುಗದ್ದೆಪೋಡಿನ ವ್ಯಕ್ತಿಯೊಬ್ಬರು ರಾಹುಲ್ ಗಾಂಧಿಗೆ ಶುದ್ಧ ಜೇನನ್ನು ನೀಡಿದರು. ಬಳಿಕ ಸಂವಾದದಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಿರು ಅರಣ್ಯ ಉತ್ಪನ್ನ ಸಂಗ್ರಹಕ್ಕೆ ಅವಕಾಶ, ಮಲೆಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಮಾಡಬಾರದು ಎಂದು ಸೋಲಿಗರು ಒತ್ತಾಯಿಸಿದರು ಇದಕ್ಕೆ ರಾಹುಲ್ ಗಾಂಧಿ ಸಕಾರಾತ್ಮಕವಾಗಿ ಸ್ಪಂದಿಸಿದರು.
-
ಚಾಮರಾಜನಗರದಲ್ಲಿ ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಶ್ರೀಯುತ @RahulGandhi ಯವರು ಭೇಟಿ ಮಾಡಿ ಅವರ ನೋವು ಆಲಿಸಿದರು ಮತ್ತು ಅವರಿಗೆ ಧೈರ್ಯ ತುಂಬಿ ಪರಿಹಾರದ ಭರವಸೆ ನೀಡಿದರು.#BharatJodoYatra pic.twitter.com/1rbDFHIp7R
— Karnataka Congress (@INCKarnataka) September 30, 2022 " class="align-text-top noRightClick twitterSection" data="
">ಚಾಮರಾಜನಗರದಲ್ಲಿ ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಶ್ರೀಯುತ @RahulGandhi ಯವರು ಭೇಟಿ ಮಾಡಿ ಅವರ ನೋವು ಆಲಿಸಿದರು ಮತ್ತು ಅವರಿಗೆ ಧೈರ್ಯ ತುಂಬಿ ಪರಿಹಾರದ ಭರವಸೆ ನೀಡಿದರು.#BharatJodoYatra pic.twitter.com/1rbDFHIp7R
— Karnataka Congress (@INCKarnataka) September 30, 2022ಚಾಮರಾಜನಗರದಲ್ಲಿ ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಶ್ರೀಯುತ @RahulGandhi ಯವರು ಭೇಟಿ ಮಾಡಿ ಅವರ ನೋವು ಆಲಿಸಿದರು ಮತ್ತು ಅವರಿಗೆ ಧೈರ್ಯ ತುಂಬಿ ಪರಿಹಾರದ ಭರವಸೆ ನೀಡಿದರು.#BharatJodoYatra pic.twitter.com/1rbDFHIp7R
— Karnataka Congress (@INCKarnataka) September 30, 2022
ಆಮ್ಲಜನಕ ದುರಂತದ ಸಂತ್ರಸ್ತರು ಅಂದು ನಡೆದ ಕರುಣಾಜನಕ ಕಥೆಗಳನ್ನು ತೆರೆದಿಟ್ಟರು, ಕೊರೊನಾದಿಂದಲೇ ಸತ್ತಿಲ್ಲ ಎಂದು ಸರ್ಕಾರ ಹೇಳುತ್ತಿದೆ ಇದು ಮೊದಲು ಸರಿಯಾಗಬೇಕು. ಮೃತಪಟ್ಟವರ ಕುಟುಂಬಕ್ಕೆ ಸರ್ಕಾರಿ ನೌಕರಿ ಕೊಡಬೇಕು ಎಂಬ ಸಂತ್ರಸ್ತರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ರಾಹುಲ್ ಗಾಂಧಿ ತಮ್ಮ ಸರ್ಕಾರ ಬಂದ ಕೂಡಲೇ ಮೊದಲ ಕೆಲಸ ಸಂತ್ರಸ್ತ ಕುಟುಂಬಗಳಿಗೆ ನೌಕರಿ ಕೊಡಿಸುವುದಾಗಿದೆ ಎಂದಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಖರ್ಗೆ ನಾಮಪತ್ರ ಸಲ್ಲಿಕೆ ಹೆಮ್ಮೆಯ ವಿಚಾರ: ಪುತ್ರ ಪ್ರಿಯಾಂಕ್