ETV Bharat / state

ಚಾಣಕ್ಯ ವಿವಿಗೆ ಭೂಮಿ ಮಂಜೂರು: ಕೋರ್ಟ್​ನಲ್ಲಿ ದಾವೆ ಹಾಕುತ್ತೇವೆ ಎಂದ ಧ್ರುವನಾರಾಯಣ್ - Chanakya university latest news

ಚಾಣಕ್ಯ ವಿವಿಗೆ ಸರ್ಕಾರ ಭೂಮಿ ಮಂಜೂರು ಮಾಡಿದೆ. 300 ಕೋಟಿ ರೂ. ಬೆಲೆ ಬಾಳುವ ಜಮೀನನ್ನು ನಿಯಮ ಉಲ್ಲಂಘಿಸಿ, ಯಾವುದೇ ಹಿನ್ನೆಲೆ ಇಲ್ಲದ ವಿವಿಗೆ ನೀಡಿರುವುದು ಸರಿಯಲ್ಲ. ಈ ಬಗ್ಗೆ ಕಾಂಗ್ರೆಸ್ ಕಾನೂನು ಹೋರಾಟ ಮಾಡಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಹೇಳಿದರು.

R Dhruvanarayan
ಆರ್.ಧ್ರುವನಾರಾಯಣ್
author img

By

Published : Sep 25, 2021, 11:44 AM IST

ಚಾಮರಾಜನಗರ: ಚಾಣಕ್ಯ ವಿವಿಗೆ ಭೂಮಿ ಮಂಜೂರು ಮಾಡಿರುವುದು ಬಿಜೆಪಿ ಸರ್ಕಾರದ ಆತುರದ ನಿರ್ಧಾರ. ಈ ಕುರಿತು ಕೋರ್ಟ್​ನಲ್ಲಿ ದಾವೆ ಹೂಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೈಗಾರಿಕಾ ಉದ್ದೇಶದಿಂದ ಬೆಂಗಳೂರಿನ ದೇವನಹಳ್ಳಿ ಹಿಂಭಾಗದಲ್ಲಿರುವ 113 ಎಕರೆ ಜಾಗವನ್ನು 175 ಕೋಟಿ ರೂ.ಗೆ ಖರೀದಿಸಿ, 50 ಕೋಟಿ ರೂ.ಗೆ ಚಾಣಕ್ಯ ವಿವಿಗೆ ಸರ್ಕಾರ ಮಂಜೂರು ಮಾಡಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ. 300 ಕೋಟಿ ರೂ. ಬೆಲೆ ಬಾಳುವ ಜಮೀನನ್ನು ನಿಯಮ ಉಲ್ಲಂಘಿಸಿ, ಯಾವುದೇ ಹಿನ್ನೆಲೆ ಇಲ್ಲದ ವಿವಿಗೆ ನೀಡಿರುವುದು ಸರಿಯಲ್ಲ. ಕಾಂಗ್ರೆಸ್ ಈ ಬಗ್ಗೆ ಕಾನೂನು ಹೋರಾಟ ಮಾಡಲಿದೆ ಎಂದು ಗುಡುಗಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಧ್ರುವನಾರಾಯಣ್

ಖಾಸಗಿ ವಿವಿ ಸ್ಥಾಪನೆಗೆ ಉತ್ಸುಕತೆ ತೋರುವ ಬಿಜೆಪಿ ಸರ್ಕಾರ, ಚಾಮರಾಜನಗರ ಜಿಲ್ಲೆಯಲ್ಲಿ ಪ್ರತ್ಯೇಕ ವಿವಿ ಸ್ಥಾಪನೆಗೆ 100 ಕೋಟಿ ರೂ. ಅನುದಾನ ನೀಡಬೇಕೆಂದು ಅವರು ಒತ್ತಾಯಿಸಿದರು. ಇದೇ ವೇಳೆ, 2020 ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸರ್ಕಾರ ಸಮಗ್ರವಾಗಿ ಚರ್ಚಿಸಿ, ಆ ನಂತರ ಜಾರಿಗೊಳಿಸಲು ಮುಂದಾಗಬೇಕೆಂದು ಆಗ್ರಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.