ಕೊಳ್ಳೇಗಾಲ: ನಿವೇಶನ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡಿರುವ ಘಟನೆ ಸತ್ತೇಗಾಲ ಗ್ರಾಮದಲ್ಲಿ ನಡೆದಿದೆ.
ಸತ್ತೇಗಾಲದ ಗ್ರಾಮದ ಶಿವಮೂರ್ತಿ, ಮಹೇಶ್ ಹಲ್ಲೆಗೊಳಗಾದವರು. ಶೃಂಗಾರ್, ನಾರಾಯಣಿ, ಪುಟ್ಟಿ ಹಲ್ಲೆ ಮಾಡಿರುವ ಆರೋಪಿಗಳಾಗಿದ್ದಾರೆ.
ಘಟನೆ ಹಿನ್ನೆಲೆ:
ಇಂದು ಬೆಳ್ಳಂಬೆಳಗ್ಗೆ ಎರಡು ಕುಟುಂಬಗಳ ನಡುವೆ ನಿವೇಶನ ವಿಚಾರವಾಗಿ ಆರಂಭವಾದ ಗಲಾಟೆ, ತೀವ್ರ ಸ್ವರೂಪ ಪಡೆದ ಪರಿಣಾಮ ಇಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆದಿದೆ. ಕಳೆದ ಆರು ವರ್ಷಗಳಿಂದ ನಿವೇಶನ ವಿಚಾರವಾಗಿ ಆಗಾಗ್ಗೆ ಎರಡು ಕುಟುಂಬಗಳ ನಡುವೆ ಸಣ್ಣ - ಪುಟ್ಟ ಜಗಳಗಳು ನಡೆಯುತ್ತಿದ್ದು, ಕಳೆದ ಒಂದೂವರೆ ವರ್ಷಗಳಿಂದ ಈ ವ್ಯಾಜ್ಯದ ಪ್ರಕರಣ ನ್ಯಾಯಾಲಯದಲ್ಲಿದೆ ಎನ್ನಲಾಗುತ್ತಿದೆ.
ಓದಿ: ಕೃಷಿ ಕಾಯ್ದೆ ಖಂಡಿಸಿ, ಕಾಂಗ್ರೆಸ್ನಿಂದ ಇಂದು ರಾಜಭವನ ಚಲೋ!
ಶೃಂಗಾರ್ ಎಂಬುವವರು ಶಿವಮೂರ್ತಿ ಎಂಬುವವನಿಗೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದ್ದು, ತಲೆಗೆ ತೀವ್ರ ಪೆಟ್ಟಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಮಹೇಶ್,ಪುಟ್ಟಿ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.