ಚಾಮರಾಜನಗರ : ದೀಪದ ಕೆಳಗೆ ಕತ್ತಲು ಎಂಬಂತೆ ಪೊಲೀಸ್ ಇಲಾಖೆಯ ಸರ್ಕಾರಿ ವಾಹನದ ವಿಮಾ ಅವಧಿ ಮುಗಿದು 7 ವರ್ಷಗಳಾದರೂ ಓಡಾಟ ನಡೆಸುತ್ತಿರುವ ಆರೋಪ ಕೇಳಿ ಬಂದಿದೆ.
ಪಿಎಸ್ಐ ವೆಂಕಟೇಶ್ ಬಳಸುತ್ತಿರುವ KA-10 G-0227 ಎಂಬ ಬೊಲೆರೊ ವಾಹನದ ವಿಮಾ ಅವಧಿ 2014ರ ನವೆಂಬರ್ 15ಕ್ಕೆ ಮುಗಿದಿದೆ ಎಂದು ಕೇಂದ್ರ ಸರ್ಕಾರದ E-Vahan ವೆಬ್ಸೈಟ್ನಲ್ಲೇ ತೋರಿಸುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲ ಪೋಸ್ಟ್ಗಳು ಹರಿದಾಡುತ್ತಿವೆ.
ಇದನ್ನೂ ಓದಿ: ಎಸ್ ನಾರಾಯಣ್ ಫೇಸ್ಬುಕ್ ಅಕೌಂಟ್ ಹ್ಯಾಕ್ ಮಾಡಿ ವಂಚನೆ : ಸೈಬರ್ ಕ್ರೈಂ ಪೊಲೀಸರಿಗೆ ದೂರು
ವಿಮೆ ಮುಗಿದು ಒಂದೆರಡು ತಿಂಗಳಾದರೇ ಸರಿ. ಆದರೆ, ಬರೋಬ್ಬರಿ 7 ವರ್ಷಗಳಾದರೂ ವಿಮೆ ಮಾಡಿಸದಿರುವುದು ನಿಜಕ್ಕೂ ವಿಪರ್ಯಾಸ. ಸಾಮಾನ್ಯ ವಾಹನ ಸವಾರರು ವಿಮೆ ಹೊಂದಿಲ್ಲದಿದ್ದರೆ ದಂಡ ಪೀಕುತ್ತಾರೆ. ಆದರೆ, ಪೊಲೀಸರೇ ವಿಮೆ ಕಟ್ಟದಿದ್ದರೆ ಅವರ ಬಳಿ ಯಾರು ದಂಡ ಕಟ್ಟಿಸುತ್ತಾರೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಈ ಬಗ್ಗೆ ಸ್ಪಷ್ಟನೆ ಕೊಟ್ಟು ಸಾರ್ವಜನಿಕರ ಅಸಮಾಧಾನವನ್ನು ಶಮನ ಮಾಡಬೇಕಿದೆ.