ETV Bharat / state

ಬೇಟೆಗಾರರಿಂದ ಕಡವೆ ಮಾಂಸ ಖರೀದಿಸಿ ಸಾಗಾಟ, ಖತರ್ನಾಕ್ ದಂಪತಿ ಬಂಧನ..! - ಮಲೆ ಮಹದೇಶ್ವರ ವನ್ಯಜೀವಿ ವಿಭಾಗ

ಬೇಟೆಯಾಡಿದ್ದ ಕಡವೆ ಮಾಂಸವನ್ನು ಖರೀದಿಸಿ ಬೈಕ್​ನಲ್ಲಿ ಸಾಗಿಸುತ್ತಿದ್ದ ದಂಪತಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ.

police-arrested-couple-in-chamaraj-nagar
ಬೇಟೆಗಾರರಿಂದ ಕಡವೆ ಮಾಂಸ ಖರೀದಿಸಿ ಸಾಗಾಟ, ಖತರ್ನಾಕ್ ದಂಪತಿ ಬಂಧನ
author img

By

Published : Jun 28, 2021, 11:56 PM IST

ಕೊಳ್ಳೇಗಾಲ, ಚಾಮರಾಜನಗರ: ಬೇಟೆಗಾರರಿಂದ ಮಾಂಸ ಖರೀದಿಸಿ ಕೊಂಡೊಯ್ಯುತ್ತಿದ್ದ ದಂಪತಿಯನ್ನು ಬಂಧಿಸಿರುವ ಘಟನೆ ಮಲೆ ಮಹದೇಶ್ವರ ವನ್ಯಜೀವಿ ವಿಭಾಗಕ್ಕೆ ಸೇರಿದ ಪಿ.ಜಿ.ಪಾಳ್ಯ-ಲೊಕ್ಕ‌ನಹಳ್ಳಿ ರಸ್ತೆಯಲ್ಲಿ ನಡೆದಿದೆ.

ಗುಳ್ಳದಬಯಲು ಗ್ರಾಮದ ನಾಗೇಶ್ ಹಾಗೂ ಈತನ ಪತ್ನಿ ಮಾದೇವಿ ಬಂಧಿತ ಆರೋಪಿಗಳಾಗಿದ್ದು, ರಾಮಾಪುರ ಗ್ರಾಮದ ಸೋಮು ಎಂಬಾತ ನಾಪತ್ತೆಯಾಗಿದ್ದಾನೆ. ಸೋಮುವಿನಿಂದ ಈ ದಂಪತಿ ಬೇಟೆಯಾಡಿದ್ದ ಕಡವೆ ಮಾಂಸವನ್ನು ಖರೀದಿಸಿ ಬೈಕ್​ನಲ್ಲಿ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಮಲೆಮಹದೇಶ್ವರ ವನ್ಯ ಜೀವಿಧಾಮದ ಡಿಸಿಎಫ್ ಏಡುಕೊಂಡಲು ಮಾರ್ಗದರ್ಶನದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

police-arrested-couple-in-chamaraj-nagar
ಬಂಧಿತರಾದ ದಂಪತಿ

ಬಂಧಿತರಿಂದ ಒಂದು ಬೈಕ್, 6.5 ಕೆಜಿ ಕಡವೆ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಅರಣ್ಯಾಧಿಕಾರಿಗಳು ನಾಪತ್ತೆಯಾದ ಆರೋಪಿಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಅಮೆರಿಕದಲ್ಲಿ ಬಹು ಮಹಡಿ ಕಟ್ಟಡ ಕುಸಿತ ಪ್ರಕರಣ: ಭಾರತ ಮೂಲದ ಅಮೆರಿಕನ್‌ ದಂಪತಿ ನಾಪತ್ತೆ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.