ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಪಾರ್ವತಿ ಬೆಟ್ಟದ ಹಿಂಭಾಗದ ಬಫರ್ ಜೋನ್ನಲ್ಲಿ ಸುಮಾರು ಆರು ವರ್ಷದ ಹೆಣ್ಣು ಹುಲಿ, ಏಳು ವರ್ಷದ ಗಂಡು ಚಿರತೆ ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಸಾವಿನ ಬಗ್ಗೆ ಅನುಮಾನಗೊಂಡ ಅರಣ್ಯ ಇಲಾಖೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸ್ಯಾಂಪಲ್ಗಳನ್ನು ಕಳುಹಿಸಿದ್ದರು. ಇಂದು ವರದಿ ಅಧಿಕಾರಿಗಳ ಕೈ ಸೇರಿದ್ದು ಎರಡು ಪ್ರಾಣಿಗಳ ದೇಹದಲ್ಲಿ ವಿಷದ ಅಂಶ ಪತ್ತೆಯಾಗಿದೆ. ಹುಲಿ ಇಲ್ಲವೇ ಚಿರತೆ ಜಾನುವಾರಿನ ಮೇಲೆ ದಾಳಿ ಮಾಡಿದ್ದರಿಂದ ದನಗಾಹಿ ಯಾರಾದರೂ ವಿಷವಿಕ್ಕಿರಬಹುದು ಎಂದು ಗುಂಡ್ಲುಪೇಟೆ ಆರ್ಎಫ್ಒ ರಾಜೇಶ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.