ETV Bharat / state

ಒಳಿತು ಮಾಡು ಮನುಸ.. ಅರಣ್ಯಾಧಿಕಾರಿ ಕಟ್ಟಿಸಿದ ದೇಗುಲಕ್ಕೆ ಜನ; ಕಾಡುಗಳ್ಳನ ಗುಡಿ‌ ಭಣಭಣ!

author img

By

Published : Jun 24, 2021, 10:29 AM IST

ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ಅರಣ್ಯಾಧಿಕಾರಿಯಾಗಿದ್ದ ಶ್ರೀನಿವಾಸ್ ಅವರ ಮುಂದಾಳತ್ವದಲ್ಲಿ ನಿರ್ಮಾಣಗೊಂಡ ಮಾರಿಯಮ್ಮ ದೇವಾಸ್ಥಾನದಲ್ಲಿ ನಿತ್ಯ ಪೂಜೆ-ಪುನಸ್ಕಾರ ನಡೆಯುತ್ತವೆ. ಆದರೆ, ಕಾಡುಗಳ್ಳ ವೀರಪ್ಪನ್​ನಿಂದ ಜೀರ್ಣೋದ್ಧಾರಗೊಂಡ ಪೆರುಮಾಳ್ ದೇವಾಲಯಕ್ಕೆ ಯಾರೂ ಹೋಗದೇ ಭಣಗುಡುತ್ತಿದೆ.

Chamarajanagar
ಅರಣ್ಯಾಧಿಕಾರಿ ಕಟ್ಟಿಸಿದ ದೇವಾಲಯಕ್ಕೆ ಜನ, ಕಾಡುಗಳ್ಳನ ಗುಡಿ‌ ಭಣಭಣ

ಚಾಮರಾಜನಗರ: ಸಮಾಜಕ್ಕೆ ಹೀರೋ ಆದವರೊಬ್ಬರು ಹಾಗೂ ಕಾಡಿಗೆ ಕಂಟಕನಾಗಿದ್ದ ವ್ಯಕ್ತಿಯೊಬ್ಬ ಒಂದೇ ಗ್ರಾಮದಲ್ಲಿ ದೇವಾಲಯಗಳನ್ನು ಕಟ್ಟಿಸಿದ್ದರು. ಒಂದರಲ್ಲಿ ದೇವರಿಗೆ ನಿತ್ಯವೂ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದರೆ, ಇನ್ನೊಂದು ದೇವಾಸ್ಥಾನ ಭೂತ ಬಂಗಲೆಯಂತಾಗಿದೆ.

ಒಳಿತು ಮಾಡು ಮನುಸ, ನೀ ಇರೋದು ಮೂರು ದಿವಸ.. ಅನ್ನೋ ಕವಿವಾಣಿಗೊಂದು ನಿದರ್ಶನ

ಹೌದು, ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ಅರಣ್ಯಾಧಿಕಾರಿಯಾಗಿದ್ದ ಶ್ರೀನಿವಾಸ್ ಮುಂದಾಳತ್ವದಲ್ಲಿ ನಿರ್ಮಾಣಗೊಂಡ ಮಾರಿಯಮ್ಮ ದೇವಾಸ್ಥಾನದಲ್ಲಿ ನಿತ್ಯ ಪೂಜೆ ನಡೆಯುತ್ತದೆ. ಜೊತೆಗೆ ಅವರ ಭಾವಚಿತ್ರಕ್ಕೂ ಪೂಜೆ ಸಲ್ಲಿಸಲಾಗುತ್ತಿದೆ. ಆದರೆ, ಕಾಡುಗಳ್ಳ ವೀರಪ್ಪನ್​ನಿಂದ ಜೀರ್ಣೋದ್ಧಾರಗೊಂಡ ಪೆರುಮಾಳ್ ದೇವಾಲಯಕ್ಕೆ ಯಾರೂ ಹೋಗದೇ ಭಣಗುಡುತ್ತಿದೆ.

ಬೇಟೆ ಮಾಡಿದ ಬಳಿಕ ಹಣ ಹಂಚಿಕೊಳ್ಳುವಾಗ ವೀರಪ್ಪನ್​​ಗೆ ಎರಡು ಪಾಲು, ಉಳಿದವರಿಗೆ ಒಂದು ಪಾಲಿನ ಜೊತೆಗೆ ದೇವರಿಗೂ ಒಂದು ಪಾಲೆಂದು ಹಣ ಎತ್ತಿಡಲಾಗುತ್ತಿತ್ತಂತೆ.‌ ಹೀಗೆ ದೇವರಿಗೆ ಎತ್ತಿಡುತ್ತಿದ್ದ ಹಣದಿಂದಲೇ ಪುದೂರು ಸಮೀಪದಲ್ಲಿ ಪೆರುಮಾಳ್ ದೇವಸ್ಥಾನವನ್ನು ವೀರಪ್ಪನ್ ಕಟ್ಟಿಸಿದ್ದ. ಪ್ರತಿವರ್ಷ ಇಲ್ಲಿ ಜಾತ್ರೆ ಮಾಡಿ, ರಾತ್ರಿ ವೇಳೆ ನಾಟಕವನ್ನೂ ಮಾಡಿಸುತ್ತಿದ್ದ.‌ ಪೊಲೀಸರು‌ ವೀರಪ್ಪನ್ ಮೇಲೆ ಹದ್ದಿನ ಕಣ್ಣಿಟ್ಟ ಬಳಿಕ ಜನರು‌‌ ದೇವಾಲಯಕ್ಕೆ ಹೋಗುವುದು ಕಡಿಮೆಯಾಯಿತು. ವೀರಪ್ಪನ್ ಮರಣದ ಬಳಿಕವೂ ಕೆಲವು ವರ್ಷ ಹಬ್ಬ ನಡೆದಿದೆಯಾದರೂ ಅಷ್ಟೇನೂ ಜನರು ಹೋಗುವುದಿಲ್ಲ ಎಂದು ಗೋಪಿನಾಥಂ ಗ್ರಾಮದ ಮಹಾಲಿಂಗಂ ಹೇಳುತ್ತಾರೆ.

ವೀರಪ್ಪನ್ ಪತ್ನಿ ಇಲ್ಲವೇ ಆತನ ಸಂಬಂಧಿಕರು ಆಗೊಮ್ಮೆ, ಈಗೊಮ್ಮೆ ತೆರಳಿ ಪೂಜೆ ಮಾಡಿ ಬರುತ್ತಾರೆ. ಬೇರೆ ಯಾರೂ ಪೆರುಮಾಳ್ ದೇವಸ್ಥಾನಕ್ಕೆ ಹೋಗುವುದಿಲ್ಲ. ಅಲ್ಲಿನ ವಾತಾವರಣ ಕಾಡಿನ ರೀತಿಯೇ ಆಗೋಗಿದೆ. ಅರಣ್ಯಾಧಿಕಾರಿ ಶ್ರೀನಿವಾಸ್ ಮುಂದಾಳತ್ವದಲ್ಲಿ ನಿರ್ಮಾಣಗೊಂಡ ಮಾರಿಯಮ್ಮ ದೇವಾಲಯದಲ್ಲಿ ನಿತ್ಯ ಮಂತ್ರ ಘೋಷಗಳು ಕೇಳುತ್ತವೆ. ಈಗಲೂ ನಮಗವರೂ ಸಾಹೇಬರೇ, ಅವರಿಗೆ ಪ್ರಥಮ ಪೂಜೆ ಅನ್ನೋದು ಜನರು ನೀಡುವ ಗೌರವ.

ಒಟ್ಟಿನಲ್ಲಿ ಒಳ್ಳೇತನಕ್ಕಷ್ಟೇ ಬೆಲೆ ಎಂಬುದಕ್ಕೆ ಈ ಇಬ್ಬರು ವ್ಯಕ್ತಿಗಳು ಕಟ್ಟಿಸಿದ ದೇವಾಲಯಗಳೇ ಸಾಕ್ಷಿಯಾಗಿದೆ. ಜನರು ಎಷ್ಟೇ ಮುಂದುವರೆದರೂ ಕೊನೆತನಕ ಇರುವುದು ಸಮಾಜಮುಖಿ ಕೆಲಸಗಳಷ್ಟೇ ಎಂಬುದಂತೂ ದಿಟ.

ಇದನ್ನೂ ಓದಿ: ಬೈಕ್​ನಲ್ಲಿ ಹೋಗುವಾಗ ಕತ್ತಿಗೆ ಸಿಲುಕಿದ ಗಾಳಿಪಟದ ದಾರ: ಮುಂದೇನಾಯ್ತು ನೋಡಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.