ETV Bharat / state

ಟೀಕೆಗೆ ಅಳುಕಲ್ಲ - ಅಂಜಲ್ಲ; ಆತ್ಮಸಾಕ್ಷಿ, ಸತ್ಯದ ಪರ ಅಧಿಕಾರ: ಸಿಎಂ ಬಸವರಾಜ ಬೊಮ್ಮಾಯಿ

ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗಲಿದೆ ಎಂಬ ಮೂಢನಂಬಿಕೆ ನನಗಿಲ್ಲ. ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗಲ್ಲ. ಇಲ್ಲಿಗೆ ಬಂದರೆ ಪುಣ್ಯ ಸಂಪಾದನೆ ಆಗಲಿದೆ. ಪುಣ್ಯವಂತರಾಗುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
author img

By

Published : Dec 13, 2022, 4:24 PM IST

Updated : Dec 13, 2022, 8:16 PM IST

ಸಿಎಂ ಬಸವರಾಜ ಬೊಮ್ಮಾಯಿ

ಚಾಮರಾಜನಗರ: ಯಾರು ಏನೇ ಟೀಕೆ ಮಾಡಿದರೂ ತಾನು ಅಂಜಲ್ಲ- ಅಳುಕಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಚಾಮರಾಜನಗರದ ಡಾ ಬಿ ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 1100 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಟೀಕೆಗಳಿಗೆ ನಮ್ಮ ಸರ್ಕಾರ ಅಳುಕಲ್ಲ, ಸತ್ಯ ಮೇವ ಜಯತೆ ನುಡಿ ಮೇಲೆ ಸತ್ಯ ಹಾಗೂ ಆತ್ಮಸಾಕ್ಷಿ ಮೇಲೆ ಸರ್ಕಾರ ನಡೆಸುತ್ತಿದ್ದೇವೆ. ಜನಪರವಾಗಿ, ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗಲಿದೆ ಎಂಬ ಮೂಢನಂಬಿಕೆ ನನಗಿಲ್ಲ. ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗಲ್ಲ. ಇಲ್ಲಿಗೆ ಬಂದರೆ ಪುಣ್ಯ ಸಂಪಾದನೆ ಆಗಲಿದೆ. ಪುಣ್ಯವಂತರಾಗುತ್ತಾರೆ. ಚಾಮರಾಜನಗರದಲ್ಲಿ ಮುಂದಿನ ದಿನಗಳಲ್ಲಿ ಕೈಗಾರಿಕಾ ಕ್ರಾಂತಿ ಮಾಡಲಿದ್ದು, ಯುವಕರು, ಬಡವರಿಗೆ ಉದ್ಯೋಗ ಸಿಗಲಿದೆ ಎಂದು ಭರವಸೆ ನೀಡಿದರು.

ಅಸಾಧ್ಯ ಎಂದುಕೊಂಡಿದ್ದನ್ನು ಸಾಧ್ಯ ಮಾಡುತ್ತಿದ್ದೇವೆ: ಈ ಹಿಂದೆ ನಕಾರಾತ್ಮಕ ಸರ್ಕಾರಗಳಿದ್ದವು. ಒಂದು ಸರ್ಕಾರದ ವೈಫಲ್ಯಗಳನ್ನು ತೋರಿಸಿ ಮತ್ತೊಂದು ಸರ್ಕಾರ ಬರುತ್ತಿತ್ತು. ಈಗ ನಮ್ಮದು ಸಕಾರಾತ್ಮಕ ಸರ್ಕಾರ. ಅಭಿವೃದ್ಧಿ ಕಾರ್ಯಗಳನ್ನು ತೋರಿಸಿ ಜನರ ಬಳಿ ಹೋಗುತ್ತೇವೆ. ನಕಾರಾತ್ಮಕ ಸರ್ಕಾರಗಳಿಂದ ಪಕ್ಷ ಬದಲಾಗುತ್ತಿತ್ತೆ ಹೊರತು ಜನರ ಆಶೋತ್ತರಗಳು ಈಡೇರುತ್ತಿರಲಿಲ್ಲ.

ಈಗ ಜನರ ಕಲ್ಯಾಣ ಆಗುತ್ತಿದೆ. ಅಸಾಧ್ಯ ಎಂದುಕೊಂಡಿದ್ದನ್ನು ಸಾಧ್ಯ ಮಾಡುತ್ತಿದ್ದೇವೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಪ್ರತಿ ಮನೆಮನೆಗೂ ಶುದ್ಧ ಕುಡಿಯುವ ನೀರು ಸಂಪರ್ಕ ಕೊಟ್ಟಿರುವುದೇ ಸಾಕ್ಷಿ ಎಂದರು.

ಜನರು ಶ್ರೀಮಂತವಾಗಿರಬೇಕು: ಎಸ್ಸಿ ಹಾಗೂ ಎಸ್ಟಿ ಮೀಸಲಾತಿ ಹೆಚ್ಚಳ ವೇಳೆ ಕೆಲವರು ವಿರೋಧ ಮಾಡಿದರು. ಹಾಗಾಗಲಿದೆ-ಹೀಗಾಗಲಿದೆ. ಕಾನೂನು ತೊಡಕು ಎನ್ನುತ್ತಿದ್ದರು. ಸಂವಿಧಾನದ ಆಶಯದಂತೆ ಜನರಿಗೆ ಕೊಡಬೇಕಾದನ್ನು ಕೊಡಬೇಕು ಎಂದು. ನಾನು ಜನರ ಕಷ್ಟ ನೋಡಿದ್ದರಿಂದ ಯಾರಾ ಮಾತು ಕೇಳದೇ ಮೀಸಲಾತಿ ಹೆಚ್ಚಿಸಿದೆ.

ಅಧಿಕಾರ ವಹಿಸಿಕೊಂಡ ನಾಲ್ಕೇ ತಾಸಿಗೆ ರೈತ ವಿದ್ಯಾನಿಧಿ ಘೋಷಣೆ ಮಾಡಿದೆ. ರಾಜಶಕ್ತಿ ಇರುವುದು ಜನ ಶಕ್ತಿಗಾಗಿ, ಸರ್ಕಾರಗಳು ಶ್ರೀಮಂತವಾಗಿದ್ದರೇ ಪ್ರಯೋಜನವಿಲ್ಲ, ಜನರು ಶ್ರೀಮಂತವಾಗಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.

ರೈತನನ್ನು ಸ್ವಾವಲಂಬಿ ಮಾಡುತ್ತೇವೆ: ಸರ್ಕಾರಗಳು ಜನಪ್ರಿಯವಾಗಿರುವುದು ಮುಖ್ಯವಲ್ಲ, ಜನಪಯೋಗಿ ಆಗಿರುವುದು ಮುಖ್ಯ. ನಾನು ನೀರಾವರಿ ಸಚಿವನಾಗಿದ್ದಾಗ ಕೆರೆ ತುಂಬುವ ಯೋಜನೆಯ ಮೊದಲನೇ ಹಂತ ಆರಂಭವಾಯಿತು. ಈಗ ನಮ್ಮ ಅವಧಿಯಲ್ಲೇ ಎರಡನೇ ಹಂತ ಮುಕ್ತಾಯಗೊಳ್ಳುತ್ತಿದೆ. ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸುವ ಕೆಲಸಕ್ಕೆ ಮುಂದಾಗುತ್ತೇವೆ. ರೈತನನ್ನು ಸ್ವಾವಲಂಬಿ ಮಾಡುತ್ತೇವೆ ಎಂದರು.

ಇನ್ನೊಂದು ವಾರದಲ್ಲಿ ಟೆಂಡರ್: ಹಿಂದಿನ ಸರ್ಕಾರಗಳು ಕೊಡುತ್ತೇವೆ. ಕೊಡ್ತೀನಿ, ಕೊಡಿಸುತ್ತೇನೆ ಎನ್ನುತ್ತಿದ್ದರು. ನಮ್ಮ ಸರ್ಕಾರ ಕೊಡ್ತೀವಿ ಎಂದರೆ ಕೊಟ್ಟೇ ಕೊಡುತ್ತೇವೆ. ಶಾಸಕ ಪುಟ್ಟರಂಗಶೆಟ್ಟಿ ಕುಡಿಯುವ ನೀರು, ರಸ್ತೆಗಾಗಿ ಮನವಿ ಕೊಟ್ಟಿದ್ದಾರೆ. ನಾನು ಇಲ್ಲೇ ಮಂಜೂರಾತಿ ಕೊಡುತ್ತಿದ್ದು, ಇನ್ನೊಂದು ವಾರದಲ್ಲಿ ಟೆಂಡರ್ ಕರೆಯಲಿದ್ದೇವೆ ಎಂದು ತಿಳಿಸಿದರು.

ಶಾಸಕ ನಿರಂಜನ ಪರ ಘೋಷಣೆಗಳು ಆಗಾಗ್ಗೆ ಮೊಳಗುತ್ತಿದ್ದವು. ಸಂಸದ ವಿ. ಶ್ರೀನಿವಾಸಪ್ರಸಾದ್ ಮಾತನಾಡುವಾಗಲೂ ಘೋಷಣೆಗಳು ಕೇಳಿ ಬಂದಾಗ ಸಂಸದರು ಜನರತ್ತ ಹರಿಹಾಯ್ದರು. ಗಂಭೀರವಾಗಿ ಕುಳಿತುಕೊಳ್ಳುವಂತೆ ತಾಕೀತು ಮಾಡಿದರು.

ಸಚಿವರುಗಳಾದ ಆರ್. ಅಶೋಕ್, ವಿ. ಸೋಮಣ್ಣ, ಶಾಸಕರುಗಳಾದ ನಿರಂಜನಕುಮಾರ್, ಸಿ. ಪುಟ್ಟರಂಗಶೆಟ್ಟಿ ಹಾಗೂ ಇನ್ನಿತರರು ಇದ್ದರು. ಚಾಮರಾಜನಗರ ಕಾರ್ಯಕ್ರಮದ ಬಳಿಕ ಹನೂರಿನ ಕಾರ್ಯಕ್ರಮಕ್ಕೆ ಸಿಎಂ ತೆರಳಿದರು. ಮಲೆ ಮಹದೇಶ್ವರ ಬೆಟ್ಟಕ್ಕೂ ಬೊಮ್ಮಾಯಿ ಭೇಟಿ ಕೊಡಲಿದ್ದಾರೆ.

ಓದಿ: ಅಪ್ಪ- ಮಗ ಇಬ್ಬರೂ ಚಾಮರಾಜನಗರಕ್ಕೆ ಭೇಟಿ: ಮೌಢ್ಯಕ್ಕೆ ಸಡ್ಡು ಹೊಡೆದ ಬಿಜೆಪಿ 2ನೇ ಸಿಎಂ ಬೊಮ್ಮಾಯಿ

ಭಾಷಣಗಳಿಂದ ಜನರ ಹೊಟ್ಟೆ ತುಂಬಲ್ಲ ಬೊಮ್ಮಾಯಿ ಟಾಂಗ್: ಹನೂರಿನಲ್ಲಿ 650 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಿಎಂ, ಭಾಷಣಗಳಿಂದ ಜನರ ಹೊಟ್ಟೆ ತುಂಬಲ್ಲ ಎಂದು ವಿಪಕ್ಷಗಳಿಗೆ ಟಾಂಗ್ ನೀಡಿದರು. ಸಾಮಾಜಿಕ ನ್ಯಾಯ ಎಂದು ಭಾಷಣಗಳನ್ನು ಮಾಡಿದರೇ ನ್ಯಾಯ ಸಿಕ್ಕಲ್ಲ ಅವಕಾಶ ಸಿಕ್ಕಾಗ ಕೆಲಸ ಮಾಡಬೇಕು. ನಾನು ಶಕ್ತಿಮೀರಿ ಬಡವರಿಗೆ ಬದುಕು ಕಟ್ಟಿಕೊಳ್ಳುವಂತ ಕೆಲಸ ಮಾಡುತ್ತಿದ್ದೇನೆ, ಸಂವಿಧಾನದ ಆಶಯ, ಆತ್ಮಸಾಕ್ಷಿಯಂತೆ ಕೆಲಸ‌‌ ಮಾಡುತ್ತೀದ್ದೇನೆ ಎಂದು ತಿಳಿಸಿದರು.

ನಾನು ಮುಖ್ಯಮಂತ್ರಿ ಆಗಲು ಯಾವುದೇ ಪ್ರಯತ್ನ ಮಾಡಿಲ್ಲ. ಆದರೆ ಕೆಲವರು ಮುಖ್ಯಮಂತ್ರಿ ಆಗಲೆಂದೇ ಹುಟ್ಟಿದ್ದಾರೆ. ನಾನು ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಬೆಳೆದವನು, ಅವರ ತತ್ವಾದರ್ಶಗಳನ್ನು ಆಡಳಿತದಲ್ಲಿ ಬಳಸುತ್ತಿದ್ದೇನೆ. ಪ.ಜಾತಿ ಮತ್ತು ಪಂಗಡದ ಮೀಸಲಾತಿ ಹೆಚ್ಚಳದ ವಿಚಾರವನ್ನೇ ಈ ಹಿಂದೆ ಹೆದರಿಕೆಯಿಂದ ಯಾರೂ ಮುಟ್ಟಲಿಲ್ಲ, ಆದರೆ ನಾನು ಧೈರ್ಯ ಮಾಡಿ ಆತ್ಮಸಾಕ್ಷಿಯಂತೆ ನಡೆದುಕೊಂಡು ಮೀಸಲಾತಿ ಹೆಚ್ಚಿಸಿದೆ.‌ ವಾಸ್ತವಾಂಶಕ್ಕೆ ಸ್ಪಂದಿಸಿದರೇ ಕ್ರಾಂತಿ ಆಗಲಿದೆ. ನಾವು ಎಷ್ಟು ವರ್ಷ ಸಿಎಂ ಆಗಿರುತ್ತೇವೆ ಎಂಬುದು ಮುಖ್ಯವಲ್ಲ. ನಾವು ಏನು ಕೆಲಸ‌ ಮಾಡಿದ್ದೇವೆ ಎಂಬುದು ಮುಖ್ಯ ಎಂದು ವಿಶ್ವಾಸದ ಮಾತುಗಳನ್ನಾಡಿದರು.

ಗಡಿಯಾಚೆಗಿನ ಶಾಲೆ ಅಭಿವೃದ್ಧಿಗೆ ಯೋಜನೆ: ನಡುಭಾಗದ ಪ್ರದೇಶದಷ್ಟೇ ಗಡಿಭಾಗದ ಜಿಲ್ಲೆಗಳ ಅಭಿವೃದ್ಧಿಯೂ ಮುಖ್ಯ. ‌ಆದ್ದರಿಂದಲೇ 1500 ಗಡಿ ಗ್ರಾಮಗಳ ಅಭಿವೃದ್ಧಿಗೆ ಯೋಜನೆ ರೂಪಿಸುತ್ತಿದ್ದೇವೆ. ಗಡಿಭಾಗದ ಶಾಲೆಗಳು, ರಸ್ತೆಗಳು ಮತ್ತು ಆಸ್ಪತ್ರೆಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ಕೊಡಲಾಗುತ್ತಿದೆ. ಗಡಿಯಾಚೆಗಿನ ಕನ್ನಡ ಶಾಲೆಗಳ ಅಭಿವೃದ್ಧಿಗೆ ಈ ಬಜೆಟ್​​ನಲ್ಲಿ ವಿಶೇಷ ಅನುದಾನ ಘೋಷಣೆ ಮಾಡುತ್ತೇನೆ ಎಂದರು.

Last Updated : Dec 13, 2022, 8:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.