ETV Bharat / state

ಎರಡು ರಾಜ್ಯಗಳ ಗಡಿಭಾಗದಲ್ಲಿದ್ದರೂ ಚಾಮರಾಜನಗರಕ್ಕೆ ಕೊರೊನಾಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆ!

ಕೊರೊನಾ ಸೋಂಕು ಇರುವ ತಮಿಳುನಾಡು, ಕೇರಳ, ರಾಜ್ಯದ ಮೈಸೂರು, ಮಂಡ್ಯ ಜಿಲ್ಲೆಯ ಗಡಿಗಳನ್ನು ಹೊಂದಿಕೊಂಡಿರುವ ಗಡಿ ಜಿಲ್ಲೆಯಾದರೂ ಕಳೆದ 60 ದಿನಗಳಲ್ಲಿ ಒಂದೂ ಪ್ರಕರಣ ದಾಖಲಾಗದೇ ಹಸಿರು ವಲಯದಲ್ಲೇ ಮುಂದುವರೆದು ರಾಜ್ಯಕ್ಕೆ ಮಾದರಿಯಾಗಿದೆ.

chamarajnagar
ಚಾಮರಾಜನಗರ
author img

By

Published : May 25, 2020, 6:07 PM IST

ಚಾಮರಾಜನಗರ: ಕೊರೊನಾ ಮುಕ್ತ ಏಕಮಾತ್ರ ಜಿಲ್ಲೆಯಾಗಿ ಗಡಿಜಿಲ್ಲೆ ಚಾಮರಾಜನಗರ ಮಾತ್ರ ಉಳಿದುಕೊಂಡು ರಾಜ್ಯದ ಕೊರೊನಾ ಮುಕ್ತ ಜಿಲ್ಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕೊರೊನಾ ಸೋಂಕು ಇರುವ ತಮಿಳುನಾಡು, ಕೇರಳ ಮತ್ತು ನಮ್ಮ ರಾಜ್ಯದ ಮೈಸೂರು, ಮಂಡ್ಯ ಜಿಲ್ಲೆಯ ಗಡಿಗಳನ್ನು ಹೊಂದಿಕೊಂಡಿರುವ ಗಡಿ ಜಿಲ್ಲೆಯಾದರೂ ಕಳೆದ 60 ದಿನಗಳಲ್ಲಿ ಒಂದೂ ಪ್ರಕರಣ ದಾಖಲಾಗದೇ ಹಸಿರು ವಲಯದಲ್ಲೇ ಮುಂದುವರೆದು ರಾಜ್ಯಕ್ಕೆ ಮಾದರಿಯಾಗಿದೆ.

ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮ, ಅಧಿಕಾರಿ ವರ್ಗದ ಶ್ರಮ, ಜಿಲ್ಲೆಯ ಜನತೆಯ ಸಹಕಾರ ಹಸಿರು ವಲಯವಾಗಲು ಕಾರಣವಾಗಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ‌. ಹಿಂದುಳಿದ ಜಿಲ್ಲೆ, ನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆಗೆ ತುತ್ತಾಗಿದ್ದ ಗಡಿಜಿಲ್ಲೆ ಕೊರೊನಾ ವಿಚಾರದಲ್ಲಿ ಮಾದರಿ ಜಿಲ್ಲೆಯಾಗಿದೆ.

ಇಲ್ಲಿಯವರೆಗೆ ಕೊರೊನಾ ಕಾಣಿಸಿಕೊಳ್ಳದ ಜಿಲ್ಲೆಗಳಾಗಿ ರಾಮನಗರ ಹಾಗೂ ಚಾಮರಾಜನಗರ ಮಾತ್ರ ಇದ್ದವು. ಆದರೆ, ರಾಮನಗರಕ್ಕೆ ತಮಿಳುನಾಡಿನಿಂದ ಬಂದಿದ್ದ ಕುಟುಂಬದ ಒಂದು ಮಗುವಿಗೆ ಸೋಂಕು ದೃಢಪಟ್ಟಿದ್ದರಿಂದ ಕೊರೊನಾ ಮುಕ್ತ ಏಕಮಾತ್ರ ಜಿಲ್ಲೆಯಾಗಿ ಚಾಮರಾಜನಗರ ಹೊರಹೊಮ್ಮಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.