ಕೊಳ್ಳೇಗಾಲ (ಚಾಮರಾಜನಗರ): ಕರ್ನಾಟಕದ ಹೆಮ್ಮೆಯ ಪುತ್ರ, ಕನ್ನಡದ ಕಣ್ಮಣಿ, ಕನ್ನಡ ಚಿತ್ರರಂಗದ ಧ್ರುವತಾರೆಯಾಗಿದ್ದ ನಟ ಪುನೀತ್ ರಾಜ್ಕುಮಾರ್ ನಮ್ಮನ್ನು ಅಗಲಿರುವುದು ರಾಜ್ಯ ಹಾಗೂ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶಾಸಕ ಎನ್.ಮಹೇಶ್ ಕಂಬನಿ ಮಿಡಿದಿದ್ದಾರೆ.
ಪಟ್ಟಣದ ಬಸ್ ನಿಲ್ದಾಣದ ಸಮೀಪ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ನಟ ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದರು.
ನನಗೆ ಎರಡು ಆಸೆ ಇತ್ತು. ಒಂದು ಸಿದ್ದಗಂಗಾ ಶ್ರೀಗಳ ಪಾದ ಮುಟ್ಟಿ ನಮಸ್ಕರಿಸುವುದು, ಮತ್ತೊಂದು ಪುನೀತ್ ಸಿಕ್ಕರೆ ಅಪ್ಪಿಕೊಳ್ಳುವ ಆಸೆ ಇತ್ತು. ಶ್ರೀಗಳು ದೈವಾದೀನರಾಗುವ ಮುನ್ನ ಅವರ ಪಾದ ಮುಟ್ಟಿ ನಮಸ್ಕರಿಸಿ ದರ್ಶನ ಪಡೆದಿದ್ದೆ. ಆದರೆ, ದೌರ್ಭಾಗ್ಯ ಅಂದ್ರೆ ಪುನೀತ್ ಅವರನ್ನು ಅಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಭಾವುಕರಾದರು.
ಪುನೀತ್ ಅವರದ್ದು ಸಾಯುವಂತ ವಯಸ್ಸಲ್ಲ, ಅವರ ದೇಹ ಸದೃಢತೆ ನೋಡಿದ್ರೆ ಅವರಿಗೆ ಹೃದಯಾಘಾತ ಸಂಭವಿಸುತ್ತೆ ಎಂದು ಯಾರು ತಿಳಿದಿರಲಿಲ್ಲ. ಈ ಘಟನೆ ರಾಜ್ಯಕ್ಕೆ ತುಂಬಾಲಾರದ ನಷ್ಟವಾಗಿದೆ ಎಂದರು.
ಪುನೀತ್ ಸಮಾಜಸೇವೆ, ಜ್ಯಾತ್ಯಾತೀತ ಮನೋಭಾವನೆ ಉಳ್ಳವವರಾಗಿದ್ದರೂ. ಇದೀಗ ನಾವೆಲ್ಲರೂ ಮಾನವೀಯ ಗುಣಗಳನ್ನು ಹೊಂದಿದ್ದ ಮೇರು ನಟನನ್ನು ಕಳೆದುಕೊಂಡಿದ್ದೇವೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ಕುಟುಂಬಕ್ಕೆ ಕರುಣಿಸಲಿ ಎಂದರು.
ಇದನ್ನೂ ಓದಿ: ನಾಳೆ ಪುನೀತ್ ಅಂತ್ಯಕ್ರಿಯೆ.. ಬೆಳಗಿನವರೆಗೂ ಅಂತಿಮ ದರ್ಶನಕ್ಕೆ ಅವಕಾಶ- ಸಿಎಂ ಬೊಮ್ಮಾಯಿ