ಚಾಮರಾಜನಗರ: ಪ್ರವಾಸಿಗರ ಸೋಗಿನಲ್ಲಿ ಕಾರು ಬಾಡಿಗೆ ಪಡೆದು ಮಾರ್ಗಮಧ್ಯೆ ಚಾಲಕನಿಗೆ ಹಲ್ಲೆ ಮಾಡಿ ಹಣ, ಮೊಬೈಲ್ ದೋಚಿರುವ ಘಟನೆ ಹನೂರು ಸಮೀಪ ನಡೆದಿದೆ.
ಮೈಸೂರಿನ ಲಲಿತಾದ್ರಿಪುರ ಗ್ರಾಮದ ನಂದೀಶ್ ಎಂಬ ಕಾರು ಚಾಲಕ ಹಲ್ಲೆಗೊಳಗಾದ ವ್ಯಕ್ತಿ. ಬೆಂಗಳೂರು ಏರ್ಪೋರ್ಟ್ನಿಂದ ಮಲೆಮಹದೇಶ್ವರ ಬೆಟ್ಟಕ್ಕೆಂದು ನಾಲ್ವರು ಯುವಕರು ಬರುತ್ತಿದ್ದರು. ಇದಕ್ಕೂ ಮುನ್ನ, ಹನೂರು ಸಮೀಪ ಕಾರಿನಲ್ಲಿದ್ದ ಓರ್ವ ವಾಕರಿಕೆ ಬರುತ್ತಿದೆ ಎಂದಿದ್ದು ಹೇಳಿದ್ದಾನೆ. ಆ ವೇಳೆ ಚಾಲಕ ಕಾರು ನಿಲ್ಲಿಸಿದ್ದಾನೆ. ಕಾರು ನಿಂತಿದ್ದೇ ತಡ ಯುವಕರು ಚಾಲಕನಿಗೆ ಚಾಕು ತೋರಿಸಿ ನಿನ್ನ ಬಳಿ ಹಣವಿದ್ದರೆ ಕೊಟ್ಟುಬಿಡು, ಇಲ್ಲದಿದ್ದರೆ ಕೊಲೆ ಮಾಡುತ್ತೇವೆ ಎಂದು ಬೆದರಿಸಿದ್ದಾರೆ.
ದುಷ್ಕರ್ಮಿಗಳು ಚಾಲಕನನ್ನು ಬಿಗಿ ಹಿಡಿದು, ಚಾಕುವಿನಿಂದ ತಿವಿದು ಚಾಲಕನ ಬಳಿ ಇದ್ದ 14 ಸಾವಿರ ರೂ. ಬೆಲೆ ಬಾಳುವ ಮೊಬೈಲ್, ಹಣವನ್ನು ಕಸಿದು ಕಾರನ್ನು ಹಳ್ಳವೊಂದಕ್ಕೆ ತಳ್ಳಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಜಲ್ಲಿಕಟ್ಟು ಕ್ರೀಡೆ ವೇಳೆ ಕಪ್ಪು ಧ್ವಜ ಪ್ರದರ್ಶಿಸಿ ಕೃಷಿ ಕಾನೂನು ವಿರುದ್ಧ ಘೋಷಣೆ: ವಿಡಿಯೋ
ಕಾರು ಹಳ್ಳಕ್ಕೆ ಬೀಳುತ್ತಿದ್ದಂತೆ ಕಟ್ಟಿದ್ದ ಕಟ್ಟು ಬಿಚ್ಚಿ ಚಾಲಕ ಕಾರಿನಿಂದ ಹೊರಬಂದಿದ್ದು, ಈ ವೇಳೆ ಪೊಲೀಸ್ ಜೀಪ್ ಬರುತ್ತಿದ್ದನ್ನು ಕಂಡು ಘಟನೆ ವಿವರಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೊಳ್ಳೇಗಾಲ ಸಾವ೯ಜನಿಕ ಆಸ್ತತ್ರೆಗೆ ದಾಖಲಾಗಿದ್ದಾನೆ. ನಾಲ್ವರು 25ರಿಂದ 30 ವಷ೯ ವಯಸ್ಸಿನವರು ಎಂದು ಚಾಲಕ ಅಂದಾಜಿಸಿದ್ದು ಕೊಳ್ಳೇಗಾಲ ಠಾಣೆಗೆ ದೂರು ನೀಡಿದ್ದಾನೆ.