ETV Bharat / state

'ಬಿಜೆಪಿ ಶಾಸಕರು ಯಡಿಯೂರಪ್ಪ ಪರ ಇರುವಾಗ ಸಹಿ ಸಂಗ್ರಹ ಅಗತ್ಯವಿಲ್ಲ' - ಶಾಸಕರ ಸಹಿ ಸಂಗ್ರಹ

ಯಡಿಯೂರಪ್ಪ ಅವರೇ ನಮ್ಮ ನಾಯಕರು. ಅವರನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವುದಿಲ್ಲ, ಬದಲಾಯಿಸುವ ಪರಿಸ್ಥಿತಿಯೂ ಇಲ್ಲ. ಅವಧಿ ಪೂರ್ಣವಾಗುವವರೆಗೂ ಬಿಎಸ್​ವೈ ಅವರೇ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದು ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಹೇಳಿದ್ದಾರೆ.

Chamarajanagar
ಶಾಸಕ ನಿರಂಜನ್ ಕುಮಾರ್
author img

By

Published : Jun 10, 2021, 8:05 AM IST

ಚಾಮರಾಜನಗರ: ಬಿಜೆಪಿಯ ಎಲ್ಲಾ ಶಾಸಕರು ಬಿ.ಎಸ್.ಯಡಿಯೂರಪ್ಪ ಅವರ ಪರವಿದ್ದೇವೆ. ಹೀಗಿರುವಾಗ ಅವರ ಪರ ಸಹಿ ಸಂಗ್ರಹಿಸುವ ಅಗತ್ಯವಿಲ್ಲ. ಯಡಿಯೂರಪ್ಪ ಅವರೇ ಅವಧಿ ಪೂರ್ಣವಾಗುವವರೆಗೂ ಮುಖ್ಯಮಂತ್ರಿಯಾಗಿರಲಿದ್ದಾರೆ. ಯಡಿಯೂರಪ್ಪ ಅವರೇ ನಮ್ಮ ನಾಯಕರು, ಅವರನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವುದಿಲ್ಲ ಎಂದು ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಹೇಳಿದರು.

ಯಡಿಯೂರಪ್ಪ ಪರ ಸಹಿ ಸಂಗ್ರಹ ವಿಚಾರ: ಶಾಸಕ ನಿರಂಜನ್ ಕುಮಾರ್ ಪ್ರತಿಕ್ರಿಯೆ

ಗುಂಡ್ಲುಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ, ಮುಂಬರುವ ಚುನಾವಣೆಗೂ ಸಹ ಅವರೇ ನಾಯಕತ್ವ ವಹಿಸಲಿದ್ದಾರೆ. ಹೀಗಿರುವಾಗ ಯಡಿಯೂರಪ್ಪ ಅವರ ಪರ ಸಚಿವ ರೇಣುಕಾಚಾರ್ಯ ಸಹಿ ಸಂಗ್ರಹಿಸುವ ಅಗತ್ಯವಿಲ್ಲ. ನನ್ನನ್ನೂ ಸಹ ಅವರು ಸಹಿ ವಿಚಾರದಲ್ಲಿ ಸಂಪರ್ಕಿಸಿಲ್ಲ ಎಂದರು.

ಯಾರೂ ಸಹ ಸಹಿ ಸಂಗ್ರಹ ಮಾಡಬಾರದು ಎಂದು ಯಡಿಯೂರಪ್ಪ ಹಾಗು ಈಶ್ವರಪ್ಪನವರೇ ಹೇಳಿದ್ದಾರೆ. ಬಿಎಸ್​​​ವೈ ಅವರ ವಿಚಾರದಲ್ಲಿ ಅಪಸ್ವರವಿಲ್ಲ. ಪಕ್ಷದಲ್ಲಿರುವ ನಾವು 120 ಜನರು ಬಿ.ಎಸ್.ಯಡಿಯೂರಪ್ಪ ಪರವಿದ್ದೇವೆ. ನಾನು ಎಂದಿಗೂ ಬಿಜೆಪಿ ಮತ್ತು ಬಿಎಸ್​​​​​​ವೈ ಪರವಾಗಿರುತ್ತೇನೆ. ಬಿಜೆಪಿಯಲ್ಲಿ ಯಾವುದೇ ಗೊಂದಲವಾಗಲಿ ಅಥವಾ ಅಪಸ್ವರಗಳಾಗಲೀ ಇಲ್ಲ. ಕೊರೊನಾ ಇರುವ ಈ ಸಂದರ್ಭದಲ್ಲಿ ಕೋವಿಡ್ ವಿರುದ್ದ ಹೋರಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ: CD CASE: ಸದ್ಯದಲ್ಲೇ​ ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಸಲಿದೆ SIT

ETV Bharat Logo

Copyright © 2025 Ushodaya Enterprises Pvt. Ltd., All Rights Reserved.