ಚಾಮರಾಜನಗರ: ಈ ದೇಶದಲ್ಲಿ ಇಂತವರು ಇರಲು ಎಷ್ಟು ಅರ್ಹರು? ಎಂದು ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿಗಳ ಕುಟುಂಬಗಳಿಗೆ ಫುಡ್ ಕಿಟ್ ವಿತರಿಸಿದ ಶಾಸಕ ಜಮೀರ್ ನಡೆಗೆ ಸೋಮಣ್ಣ ಕಿಡಿಕಾರಿದರು. ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಮ್ಮ ದೇಶದಲ್ಲಿ ಈ ರೀತಿಯ ಪ್ರಸಂಗಗಳು ನಡೆಯುತ್ತವೆ ಎಂಬುದಕ್ಕೆ ಇದೊಂದು ಸಾಕ್ಷಿ. ಇದನ್ನು ಮಾಧ್ಯಮಗಳು ನೋಡಬೇಕು. ಕಾನೂನು ಎಲ್ಲರಿಗೂ ಒಂದೇ ಎಂದರು.
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸುತ್ತಾ, ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು. ಅವರು ರಾಜೀನಾಮೆ ಕೇಳುತ್ತಿರುತ್ತಾರೆ. ಅಕ್ರಮ ನಡೆದಿರುವ ಬಗ್ಗೆ ತನಿಖೆಯಾಗುತ್ತಿದೆ. ಈ ರೀತಿಯ ಚಟುವಟಿಕೆಯನ್ನು ತಹಬದಿಗೆ ತರಲು ಸಿಎಂ ಮುಂದಾಗಿದ್ದಾರೆ. ಸರ್ಕಾರ ಸರಿಯಾದ ಪಥದಲ್ಲೇ ನಡೆಯತ್ತಿದೆ ಎಂದು ಪರೋಕ್ಷವಾಗಿ ಗೃಹ ಸಚಿವರನ್ನು ಬೆಂಬಲಿಸಿದರು.
ಇದನ್ನೂ ಓದಿ: ಹುಬ್ಬಳ್ಳಿ ಗಲಭೆ: ಬಂಧಿತ ಆರೋಪಿಗಳ ಕುಟುಂಬಸ್ಥರಿಗೆ ಶಾಸಕ ಜಮೀರ್ ಸಹಾಯಹಸ್ತ!