ETV Bharat / state

ಧರ್ಮ ಬಿಟ್ಟು ರಾಜಕಾರಣ ಇಲ್ಲ- ರಾಜಕಾರಣ ಬಿಟ್ಟು ಧರ್ಮ ಇಲ್ಲ: ಕೃಷಿ ಸಚಿವ ಪಾಟೀಲ್

author img

By

Published : Jun 15, 2021, 3:05 PM IST

Updated : Jun 15, 2021, 4:49 PM IST

ಮುಂದಿನ ಚುನಾವಣೆಯನ್ನೂ ಯಡಿಯೂರಪ್ಪ ನೇತೃತ್ವದಲ್ಲೇ ನಡೆಸುತ್ತೇವೆ. ಅರುಣ್ ಸಿಂಗ್ ಅವರು ಉಸ್ತುವಾರಿ ಆಗಿರುವುದರಿಂದ ಪಕ್ಷದ ಸಂಘಟನೆಗೆ ಬರುತ್ತಿದ್ದಾರೆ ಎಂದು ಹೇಳಿದರು. ಸಹಿ ಸಂಗ್ರಹಣೆ, ಫೋನ್ ಮಾಡಿ ಹೇಳುವ ಯಾವುದೇ ವಿದ್ಯಮಾನಗಳು ನಡೆಯುತ್ತಿಲ್ಲ. ಸಹಿ ಸಂಗ್ರಹಣೆ ಬಗ್ಗೆ ರೇಣುಕಾಚಾರ್ಯ ಅವರನ್ನೇ ಕೇಳಿ, ಸಿಎಂ ಬದಲಾವಣೆ ಎಂಬುದು ಎಲ್ಲವೂ ಊಹಾಪೋಹ..

patil
patil

ಚಾಮರಾಜನಗರ : ಧರ್ಮ ಬಿಟ್ಟು ರಾಜಕಾರಣ ಇಲ್ಲ. ರಾಜಕಾರಣ ಬಿಟ್ಟು ಧರ್ಮ ಇಲ್ಲ. ಹಿಂದೆ ರಾಜಗುರುಗಳಿದ್ದರು. ಈಗ ಸಮುದಾಯಗಳ ಸ್ವಾಮೀಜಿಗಳಿದ್ದಾರೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ವ್ಯಾಖ್ಯಾನಿಸಿದರು. ಚಾಮರಾಜನಗರದಲ್ಲಿ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ರು. ಭಾರತದಲ್ಲಿ ಪ್ರತಿಯೋರ್ವ ನಾಗರಿಕನಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಕೆಲ ಸ್ವಾಮೀಜಿಗಳು ಬಿಎಸ್​ವೈ ಪರ ಮಾತನಾಡಿದ್ದಾರಷ್ಟೇ.. ಧರ್ಮ ಬಿಟ್ಟು ರಾಜಕಾರಣ ಇಲ್ಲ- ರಾಜಕಾರಣ ಬಿಟ್ಟು ಧರ್ಮ ಇಲ್ಲ. ಅವರವರ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಸಿಎಂ ಬದಲಾವಣೆ ಕುರಿತು ಮಾತನಾಡಿ, ಒಂದು ವಾರಗಳಿಂದ ಹೇಳುತ್ತಿದ್ದೇನೆ, ಯಾವುದೇ ರೀತಿಯ ಮುಖ್ಯಮಂತ್ರಿ ಬದಲಾವಣೆ ಇಲ್ಲ, ಇನ್ನು ಎರಡು ವರ್ಷ ಅವರೇ ಸಿಎಂ, ಮುಂದಿನ ಚುನಾವಣೆಯನ್ನೂ ಯಡಿಯೂರಪ್ಪ ನೇತೃತ್ವದಲ್ಲೇ ನಡೆಸುತ್ತೇವೆ. ಅರುಣ್ ಸಿಂಗ್ ಅವರು ಉಸ್ತುವಾರಿ ಆಗಿರುವುದರಿಂದ ಪಕ್ಷದ ಸಂಘಟನೆಗೆ ಬರುತ್ತಿದ್ದಾರೆ ಎಂದು ಹೇಳಿದರು. ಸಹಿ ಸಂಗ್ರಹಣೆ, ಫೋನ್ ಮಾಡಿ ಹೇಳುವ ಯಾವುದೇ ವಿದ್ಯಮಾನಗಳು ನಡೆಯುತ್ತಿಲ್ಲ. ಸಹಿ ಸಂಗ್ರಹಣೆ ಬಗ್ಗೆ ರೇಣುಕಾಚಾರ್ಯ ಅವರನ್ನೇ ಕೇಳಿ, ಸಿಎಂ ಬದಲಾವಣೆ ಎಂಬುದು ಎಲ್ಲವೂ ಊಹಾಪೋಹ ಎಂದು ಸ್ಪಷ್ಟ ಪಡಿಸಿದರು.

ನಾಯಕತ್ವ ಬದಲಾವಣೆ ಕುರಿತಂತೆ ಕೃಷಿ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯೆ

ಕೃಷಿ ಇಲಾಖೆ ವೈಫಲ್ಯವಲ್ಲ: ಬಳ್ಳಾರಿಯಲ್ಲಿ ಲಾಠಿಚಾರ್ಜ್​ ನಡೆದಿರುವುದು ಕೃಷಿ ಇಲಾಖೆಯ ವೈಫಲ್ಯ ಎಂದು ಬಿಂಬಿಸುತ್ತಿರುವುದು ಸರಿಯಲ್ಲ. ಮೆಣಸಿನ ಬೀಜವನ್ನು ಕೃಷಿ ಇಲಾಖೆ ವಿತರಿಸುತ್ತಿಲ್ಲ, ಖಾಸಗಿ ಕಂಪನಿಯೊಂದು ಆ ಬೀಜ ಮಾರಾಟ ಮಾಡಲಿದೆ. ಹೆಚ್ಚು ರೈತರು ಬೀಜ ಕೊಳ್ಳಲು ಹೋಗಿದ್ದರಿಂದ ಹೆಚ್ಚು-ಕಡಿಮೆ ಆಗಿದೆ, ಅದು ನಮ್ಮ ವೈಫಲ್ಯವಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸರ್ಕಾರ ನೀಡಿರುವುದು ಕೋವಿಡ್ ಸಂಕಷ್ಟದ ಸಹಾಯಧನವಷ್ಟೇ, ಪರಿಹಾರವಲ್ಲ. ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯ ಆಸರೆ ಎಂಬಂತೆ ಸಹಾಯಧನ ನೀಡಲಾಗಿದೆ. ಇನ್ನು, ಯಾರಿಗೆ ಹಣ ಬಂದಿಲ್ಲವೋ ಅವರ ಮಾಹಿತಿ ಕ್ರೋಢೀಕರಿಸಿ ಕ್ರಮಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಚಾಮರಾಜನಗರದಲ್ಲಿ ವಾಡಿಕೆಗಿಂತ ಶೇ. 17ರಷ್ಟು ಕಡಿಮೆ ಮಳೆಯಾಗಿದೆ. ಮೇ ತಿಂಗಳಿನಲ್ಲಿ ಶೇ.51ರಷ್ಟು ಮಳೆ ಕೊರತೆ ಉಂಟಾಗಿದೆ. ಜಿಲ್ಲೆಯಲ್ಲಿ ಈವರೆಗೆ ಶೇ.39.68ರಷ್ಟು ಬಿತ್ತನೆ ಕಾರ್ಯ ಆಗಿದೆ. ಮಳೆ ಚುರುಕುಗೊಳ್ಳುವುದರಿಂದ ಬಿತ್ತನೆ ಹೆಚ್ಚಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Last Updated : Jun 15, 2021, 4:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.