ಚಾಮರಾಜನಗರ : ಕಾರೊಳಗೆ ಕುಳಿತು ಬೆಂಕಿ ಹಚ್ಚಿಕೊಂಡು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಳಂದೂರು ತಾಲೂಕಿನ ಮಾಂಬಳ್ಳಿ ಸಮೀಪದ ರಸ್ತೆಯಲ್ಲಿ ನಡೆದಿದೆ.
ಮಾಂಬಳ್ಳಿ ಗ್ರಾಮದ ಪ್ರೇಮಿಗಳಾದ ಕಾಂಚನಾ (20), ಶ್ರೀನಿವಾಸ್ (23) ಎಂಬುವರು ಆತ್ಮಹತ್ಯೆಗೆ ಶರಣಾದವರು. ಕಾಂಚನಾ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನರ್ಸ್ ಆಗಿದ್ದು, ಶ್ರೀನಿವಾಸ್ ಚಾಲಕ ವೃತ್ತಿ ಮಾಡುತ್ತಿದ್ದರು.
ಮೃತರಿಬ್ಬರೂ ಕಳೆದ ಹಲವಾರು ವರ್ಷಗಳಿಂದಲೂ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಚಾಮರಾಜನಗರ ಎಸ್ಪಿ ಭೇಟಿ ನೀಡಿದ್ದಾರೆ. ಮಾಂಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಓದಿ: ಸ್ವಾತಂತ್ರ್ಯೋತ್ಸವಕ್ಕೂ ಮುನ್ನಾ ದಿನ ಭರ್ಜರಿ ಕಾರ್ಯಾಚರಣೆ; 55 ಪಿಸ್ತೂಲ್, 50 ಕಾರ್ಟಿಡ್ಜ್ ಸೇರಿ ನಾಲ್ವರ ಬಂಧನ