ETV Bharat / state

ಡ್ರೈವಿಂಗ್ ವೇಳೆ ಹೃದಯಾಘಾತದಿಂದ ಲಾರಿ ಚಾಲಕ ಸಾವು: ಗೂಡ್ಸ್ ಟೆಂಪೋ, ವಿದ್ಯುತ್ ಕಂಬಕ್ಕೆ ಡಿಕ್ಕಿ

ಡ್ರೈವಿಂಗ್ ವೇಳೆ ಹೃದಯಾಘಾತವಾದ ಪರಿಣಾಮ ಟೆಂಪೋ, ವಿದ್ಯುತ್ ಕಂಬಕ್ಕೆ ಗುದ್ದಿ ಲಾರಿ ಚಾಲಕ ಮೃತಪಟ್ಟಿದ್ದಾನೆ.

author img

By ETV Bharat Karnataka Team

Published : Oct 3, 2023, 6:59 AM IST

Updated : Oct 3, 2023, 7:49 AM IST

while driver suffers heart attack
ಡ್ರೈವಿಂಗ್ ವೇಳೆ ಹೃದಯಾಘಾತದಿಂದ ಲಾರಿ ಚಾಲಕ ಸಾವು

ಚಾಮರಾಜನಗರ: ಲಾರಿ ಡ್ರೈವಿಂಗ್ ವೇಳೆ ಹೃದಯಾಘಾತವಾದ ಪರಿಣಾಮ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಚಾಲಕ ಸ್ಥಳದಲ್ಲೇ ಅಸುನೀಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ನಡೆದಿದೆ. ತಮಿಳುನಾಡು ಮೂಲದ ಸೆಲ್ವರಾಜ್(50) ಮೃತ ಲಾರಿ ಚಾಲಕ.‌

ನಂಜನಗೂಡು ಕಡೆಯಿಂದ ಗುಂಡ್ಲುಪೇಟೆ ಕಡೆಗೆ ತೆರಳುತ್ತಿದ್ದ ವೇಳೆ ಲಾರಿ ಚಾಲಕನಿಗೆ ಹಾರ್ಟ್ ಅಟ್ಯಾಕ್ ಆಗಿದೆ. ಇದರಿಂದಾಗಿ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡ ಚಾಲಕ, ಸರ್ವೀಸ್ ರಸ್ತೆಯಲ್ಲಿ ನಿಂತಿದ್ದ ಗೂಡ್ಸ್ ಟೆಂಪೋಗೆ ಗುದ್ದಿ, ವಿದ್ಯುತ್ ಕಂಬಕ್ಕೂ ಡಿಕ್ಕಿ ಹೊಡೆದಿದ್ದಾನೆ. ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸದ್ಯ, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು ಬೇಗೂರು ಪೊಲೀಸರು ಮುಂದಿನ ಕ್ರಮ‌ ಕೈಗೊಂಡಿದ್ದಾರೆ.

ಇದನ್ನೂ ಓದಿ: ಜಿಪಿಎಸ್​ ಸೂಚಿಸಿದಂತೆ ಹೋಗಿ ಪೆರಿಯಾರ್​ ನದಿಗೆ ಬಿದ್ದ ಕಾರು; ಕೇರಳದ ಇಬ್ಬರು ಯುವ ವೈದ್ಯರು ನೀರುಪಾಲು

ತುಮಕೂರು ಬಳಿ ಸೋಮವಾರ ಅಪಘಾತ: ತುಮಕೂರು‌ ಜಿಲ್ಲೆ ಕೊರಟಗೆರೆ ತಾಲೂಕಿನಲ್ಲಿ ಅರಸಾಪುರ ಗೇಟ್ ಬಳಿ ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಪವನ್ (20), ಬಾಲಾಜಿ (18) ಮತ್ತು ಅನಿತಾ (40) ಮೃತರೆಂದು ಗುರುತಿಸಲಾಗಿದೆ. ತಾಯಿ, ಮಗ ಹಾಗೂ ಅಳಿಯ (ಅಣ್ಣನ ಮಗ) ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇವರು ಮಧುಗಿರಿ ಮೂಲದ ವೀರೇನಹಳ್ಳಿ ತಾಂಡಾದ ವಾಸಿಗಳಾಗಿದ್ದಾರೆ. ಅಪಘಾತದ ಬಳಿಕ ಲಾರಿ ಚಾಲಕ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಕಳೆದವಾರ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಮೂವರು ಮೃತಪಟ್ಟು, ಓರ್ವ ಗಂಭೀರವಾಗಿ ಗಾಯಗೊಂಡಿದ್ದ. ಆಕಾಶ್ (20), ಹೇಮಂತ್ (28) ಮತ್ತು ಶಿವಕುಮಾರ್ ಮೃತರೆಂದು ಗುರುತಿಸಲಾಗಿತ್ತು. ಬೆಂಗಳೂರಿಂದ ಪಾವಗಡ ಕಡೆಗೆ ಬರುತ್ತಿದ್ದ ಕಾರು ಮತ್ತು ಎದುರಿನಿಂದ ಬಂದ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿತ್ತು. ಕಾರು ಸಂಪೂರ್ಣ ನಜ್ಜುಗುಜ್ಜಾಗಿತ್ತು. ಕಾರಿನಲ್ಲಿದ್ದವರು ಪಾವಗಡ ಮೂಲದವರು ಎಂದು ತಿಳಿದುಬಂದಿತ್ತು.

ಶಿವಮೊಗ್ಗದಲ್ಲಿ ಎರಡು ದಿನಗಳ ಹಿಂದೆ ಅಪಘಾತ: ಲಾರಿ ಮತ್ತು ಎರಡು ಬೈಕ್​​ಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಬಾಲಕರು ಸ್ಥಳದಲ್ಲೇ ಮೃತಪಟ್ಟಿದ್ದರು. ಒಂದೇ ಬೈಕ್​​ನಲ್ಲಿ ಪ್ರಯಾಣಿಸುತ್ತಿದ್ದ ಶಶಾಂಕ್(17), ಯಶವಂತ್(17) ಹಾಗೂ ವಿಕಾಸ್(17) ಸಾವನ್ನಪ್ಪಿದವರು ಎಂದು ಗುರುತಿಸಲಾಗಿದೆ. ಇನ್ನೊಂದು ಬೈಕ್​​ನಲ್ಲಿದ್ದ ಅರದೊಟ್ಲು ಗ್ರಾಮದ ಯುವಕ ಗಗನ್ ಗಂಭೀರವಾಗಿ ಗಾಯಗೊಂಡಿದ್ದು, ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ: ಕಾರು ಅಪಘಾತ ಪ್ರಕರಣ: ನಟ ನಾಗಭೂಷಣ್ ಠಾಣಾ ಜಾಮೀನಿನ ಮೇಲೆ ಬಿಡುಗಡೆ- ಡಿಸಿಪಿ

Last Updated : Oct 3, 2023, 7:49 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.