ಕೊಳ್ಳೇಗಾಲ : ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆ ನಗರದಲ್ಲಿ ಜನ-ಜೀವನ, ವ್ಯಾಪಾರ, ವಹಿವಾಟು, ಸಾರಿಗೆ ವ್ಯವಸ್ಥೆಯನ್ನು ಖುದ್ದು ಪರಿಶೀಲಿಸಿದ ಜಿಲ್ಲಾಧಿಕಾರಿ ಎಂ ಆರ್ ರವಿ, ಅಧಿಕಾರಿಗಳಿಗೆ ಕೆಲವು ಸೂಚನೆಗಳನ್ನು ನೀಡಿದ್ದಾರೆ.
ಹಸಿರು ವಲಯದಲ್ಲಿ ಲಾಕ್‌ಡೌನ್ ಸಡಿಲಿಕೆಯಾದ ಹಿನ್ನೆಲೆ ಕೊಳ್ಳೇಗಾಲದ ಜನ ಜೀವನ ಯಥಾಸ್ಥಿತಿಗೆ ಬಂದಿದೆ. ಈ ಸಂಬಂಧ ಜಿಲ್ಲಾಧಿಕಾರಿ ಜೊತೆಗೂಡಿ ಜಿಲ್ಲಾ ವರಿಷ್ಠಾಧಿಕಾರಿ ಹೆಚ್ ಡಿ ಆನಂದ್ ಕುಮಾರ್ ಸಹ ನಗರ ಸುತ್ತಾಟ ನಡೆಸಿದರು.
ಬಾರ್‌ಗಳಲ್ಲಿ ಸೀಮಿತ ಮದ್ಯ ಮಾರಾಟ, ಸಾರ್ವಜನಿಕರಲ್ಲಿ ಅಂತರ, ಬಸ್‌ನಲ್ಲಿ ಪ್ರಯಾಣಿಸುವಾಗ ಮಾಸ್ಕ್ ಖಡ್ಡಾಯ, ಬಸ್‌ನೊಳಗೆ ನಿಗದಿಪಡಿಸಿದ ಸಂಖ್ಯೆಯ ಅನುಗುಣವಾಗಿ ಜನ ಸಂಚಾರ ನಡೆಯಬೇಕು. ನಿಯಮ ಉಲಂಘಿಸಿದವರೆಗೆ ಮುಲಾಜಿಲ್ಲದೆ ದಂಡ ವಿಧಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗಳಿಗೆ ಎಂ ಆರ್ ರವಿ ಖಡಕ್ ಸೂಚನೆ ನೀಡಿದ್ದಾರೆ.