ಚಾಮರಾಜನಗರ: ಲಾಕ್ಡೌನ್ ಸಡಿಲಿಕೆಯಾಗಿ ಇಂದು ಮದ್ಯದಂಗಡಿ ತೆರೆದಿರುವುದರಿಂದ ಕುಡುಕರು ಜಿಲ್ಲಾದ್ಯಂತ ಎಂಎಸ್ಐಎಲ್ ಮುಂದೆ ಸರತಿ ಸಾಲಲ್ಲಿ ನಿಂತಿದ್ದಾರೆ.
9 ಗಂಟೆಗೆ ತೆರೆಯುವ ಮದ್ಯದಂಗಡಿಗೆ ಬೆಳಗ್ಗೆಯಿಂದಲೇ ಸರತಿ ಸಾಲಲ್ಲಿ ನಿಂತು ಎಣ್ಣೆ ಕುಡಿಯಲು ತುದಿಗಾಲಲ್ಲಿ ನಿಂತು ಚಡಪಡಿಸುತ್ತಿದ್ದಾರೆ.
ಒಂದೂವರೆ ತಿಂಗಳಿನ ಬಳಿಕ ಮದ್ಯದಂಗಡಿಗಳು ತೆರೆಯುತ್ತಿರುವುದರಿಂದ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಮದ್ಯಕ್ಕಾಗಿ ಕಾದು ಕುಳಿತಿದ್ದಾರೆ.
ಇದೇ ಪರಿಸ್ಥಿತಿ ಗುಂಡ್ಲುಪೇಟೆ, ಕೊಳ್ಳೇಗಾಲದಲ್ಲೂ ಕಂಡುಬಂದಿದ್ದು ಕಿಕ್ಕೇರಿಸಿಕೊಳ್ಳಲು ಗುಂಡುಪ್ರಿಯರು ಸದ್ಯ ಮುಗಿಬೀಳುತ್ತಿದ್ದಾರೆ.