ಗುಂಡ್ಲುಪೇಟೆ : ತಾಲೂಕಿನ ಹಸಗೂಲಿ ಗ್ರಾಮದಲ್ಲಿ ಪಾಳುಬಾವಿಗೆ ಬಿದ್ದಿರುವ ಚಿರತೆಯನ್ನು ಸೆರೆ ಹಿಡಿಯಲು ಬಾವಿಯೊಳಗೆ ನಾಯಿ ಕಟ್ಟಿ ಬೋನು ಇಳಿಸಲಾಯಿತು.
ಮಂಗಳವಾರ ಗ್ರಾಮದ ನಿಂಗರಾಜಪ್ಪ ಎಂಬವರ ಜಮೀನಿನ ಪಾಳುಬಾವಿಗೆ ಚಿರತೆ ಬಿದ್ದಿದ್ದು, ಅದನ್ನು ಮೇಲಕ್ಕೆತ್ತಲು ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಬಾವಿ ಆಳವಿದ್ದು ಬಂದೂಕಿನಿಂದ ಶೂಟ್ ಮಾಡಿದಾಗ ಪೊಟರೆಯೊಳಗೆ ಸೇರಿಕೊಂಡರೆ ತೊಂದರೆಯಾಗುತ್ತದೆ ಎಂದು ಅರಿವಳಿಕೆ ನೀಡಿಲ್ಲ.
ಹಾಗಾಗಿ, ಬಾವಿಯನ್ನು ಬಲೆಯಿಂದ ಮುಚ್ಚಿ ಬೋನು ಇಡಲಾಗಿದೆ. ಹಸಿವಿನಿಂದಾದರೂ ಚಿರತೆ ಹೊರ ಬರುವ ಸಾಧ್ಯತೆಯಿದೆ. ಹೀಗಾಗಿ ನಾಯಿ ಕಟ್ಟಿ ಬೋನ್ ಇಡಲಾಗಿದೆ ಎಂದು ವಲಯಾರಣ್ಯಾಧಿಕಾರಿ ಡಾ.ಲೋಕೇಶ್ ತಿಳಿಸಿದರು.