ಕೊಳ್ಳೇಗಾಲ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಇಲ್ಲಿನ ಕುಂತೂರು ಹಾಗೂ ಟಗರಪುರ ಕೆರೆ ಹೂಳೆತ್ತುವ ಕೆಲಸದಲ್ಲಿ ಶಾಸಕ ಎನ್ ಮಹೇಶ್ ಕೈ ಜೊಡಿಸಿದ್ದಾರೆ. ಕೆರೆಗೆ ಇಳಿದು ಸ್ವತಃ ಮಣ್ಣನ್ನು ಅಗೆಯುವ ಮೂಲಕ ಕಾರ್ಮಿಕರಿಗೆ ಸಾಥ್ ನೀಡಿದರು.
ಮಹಾಮಾರಿ ಕೊರೊನಾ ದೇಶಕ್ಕೆ ವಕ್ಕರಿಸಿದ್ದರಿಂದ ಕೂಲಿ ಕಾರ್ಮಿಕರಿಗೆ ಭಾರಿ ಹೊಡೆತ ಬಿದ್ದಿದೆ. ಇದೀಗ ನರೇಗಾ ಉದ್ಯೋಗ ನೀಡಿರುವುದು ಜನತೆಯಲ್ಲಿ ಜೀವ ಕಳೆ ತಂದಿದೆ. ಈ ಬಗ್ಗೆ ಕೆರೆ ಅಭಿವೃದ್ದಿ ಕೆಲಸದಲ್ಲಿ ಭಾಗಿಯಾಗಿ ಮಾತನಾಡಿ ಶಾಸಕ ಎನ್.ಮಹೇಶ್ ಅವರು, ಕುಟುಂಬವೊಂದರಲ್ಲಿ ಒಬ್ಬರಿಗೆ ನರೇಗಾ ಯೋಜನೆಯಲ್ಲಿ ಕೆಲಸ ನೀಡಿದ್ದೆಯಾದ್ರೆ ಆ ಕುಟುಂಬದ ಆರ್ಥಿಕತೆ ಸದೃಢವಾಗುತ್ತದೆ ಎಂದರು.
ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ 6 ಸಾವಿರ ಜನಕ್ಕೆ ಉದ್ಯೋಗ ಸಿಕ್ಕಿದೆ. ಲಾಕ್ಡೌನ್ ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ದೊರಕಿದಂತಾಗಿದೆ ಎಂದರು.