ETV Bharat / state

ಬಸ್ ತಡೆದು ಕೊಳ್ಳೇಗಾಲ ವಿದ್ಯಾರ್ಥಿಗಳ ಪ್ರತಿಭಟನೆ: ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹ - kollegala chamrajnagara latest news

ಸೂಕ್ತ ಬಸ್ ನಿಯೋಜನೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು‌ ಎಚ್ಚರಿಸಿದ್ದಾರೆ. ಇನ್ನೂ ಇಲ್ಲಿನ ಡಿಪೋ ಮ್ಯಾನೇಜರ್​ಗೆ ಕರೆ ಮಾಡಿದ ಗ್ರಾಮಸ್ಥರು, ದೂರು‌ ನೀಡಿ ತರಾಟೆಗೆ ತೆಗೆದುಕೊಂಡಿದ್ದು, ಸಮಸ್ಯೆ ಬಗೆಹರಿಸುವುದಾಗಿ ಇಲಾಖೆಯ ಸಿಬ್ಬಂದಿಯೊಬ್ಬರನ್ನು ಕಳುಹಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲಾಗಿದೆ.

kollegala students protest demanding as provide proper bus for us
ಬಸ್ ತಡೆದು ಕೊಳ್ಳೇಗಾಲ ವಿದ್ಯಾರ್ಥಿಗಳ ಪ್ರತಿಭಟನೆ: ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹ
author img

By

Published : Mar 16, 2021, 1:39 PM IST

ಕೊಳ್ಳೇಗಾಲ: ಸರಿಯಾದ ಸಮಯಕ್ಕೆ ಬಸ್ ಬಿಡುವಂತೆ ಆಗ್ರಹಿಸಿ ಗುಂಡೇಗಾಲ ಹಳೇ ಬಸ್ ಸ್ಟ್ಯಾಂಡ್ ಬಳಿ ಸಾರಿಗೆ ಬಸ್ ತಡೆದು ಒಂದು ಗಂಟೆಗೂ ಹೆಚ್ಚು ಕಾಲ ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾರೆ.

ತಾಲೂಕಿನ ಉಗನೀಯ - ಪಾಳ್ಯದಿಂದ ಕೊಳ್ಳೇಗಾಲ ಪಟ್ಟಣಕ್ಕೆ ಬೆಳಗ್ಗಿನ ವೇಳೆ ಬರಬೇಕಾದ ಬಸ್​ಗಳು ಸರಿಯಾದ ಸಮಯಕ್ಕೆ ಬಾರದ ಕಾರಣ ಶಾಲಾ - ಕಾಲೇಜಿಗೆ ತೆರಳುವ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಬಸ್ ತಡೆದಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆ: ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹ

2 ಬಸ್​ಗಳನ್ನು ಮಾತ್ರ ನಿಯೋಜಿಸಿರುವ ಬಗ್ಗೆ ಆಕ್ರೋಶ:

1 ವರ್ಷದ ಹಿಂದೆ ನಮ್ಮೂರಿನ ಕಡೆಗೆ 3 ಬಸ್​​​ಗಳನ್ನು ನಿಯೋಜಿಸಲಾಗಿತ್ತು. ಬೆಳಗ್ಗೆ 8:15 ಒಂದು ಬಸ್​, 8:45ಕ್ಕೆ ಹಾಗೂ 9:30ಕ್ಕೆ ಒಂದು ಬಸ್ ಬರುತ್ತಿತ್ತು. ಆದರೀಗ ಒಂದು ಬಸ್ ಬರುತ್ತಿಲ್ಲ, ಕೇವಲ 2 ಬಸ್​ಗಳ ಸೇವೆ ಮಾತ್ರ ಇದೆ. ಅದೂ ಕೂಡ ಸರಿಯಾಗಿ ಸಮಯಕ್ಕೆ ಬಾರದೇ ವಿದ್ಯಾರ್ಥಿಗಳು ಶಾಲಾ- ಕಾಲೇಜಿಗೆ ತೆರಳಲು ಹರಸಹಾಸ ಪಡುತ್ತಿದ್ದಾರೆ. ಸದ್ಯ 8:15 ಕ್ಕೆ ಒಂದು ಬಸ್ ಬಂದರೆ, 9.30ಕ್ಕೆ ಮತ್ತೊಂದು ಬಸ್ ಬರುತ್ತದೆ. 2 ಬಸ್​ಗಳು ಸಾಲದೇ ಪರದಾಡುವ ಪರಿಸ್ಥಿತಿ ಉಂಟಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಶಾಲಾ- ಕಾಲೇಜಿಗೆ ತೆರಳಲು ತೊಡಕು:

ಉಗನೀಯ - ಪಾಳ್ಯ ಮಾರ್ಗದಲ್ಲಿ ಗುಂಡೇಗಾಲ, ಜಿನಕನಹಳ್ಳಿ, ನರೀಪುರ ಗ್ರಾಮಗಳು ಸಿಗುತ್ತವೆ. ಇಲ್ಲಿಂದ ನೂರಾರು ವಿದ್ಯಾರ್ಥಿಗಳು ನಿತ್ಯ ಪಟ್ಟಣಕ್ಕೆ ಬರುತ್ತಾರೆ. 5 ಗ್ರಾಮಗಳಿಂದ ಬರುವ ನೂರಾರು ವಿದ್ಯಾರ್ಥಿಗಳಿಗೆ ಎರಡು ಬಸ್ ಸೇವೆ ಸೇವೆ ಸಾಕಾಗುವುದಿಲ್ಲ. ನೂಕುನುಗ್ಗಲಿನಲ್ಲಿ ಮಹಿಳೆಯರು, ಮಕ್ಕಳು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಂಚರಿಸಬೇಕಿದೆ. ಪರಿಣಾಮ ಸಮರ್ಪಕವಾಗಿ ತರಗತಿಗಳಿಗೆ ಹೋಗದೇ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ ಎಂದು ಸ್ಥಳೀಯ ಸುನೀಲ್ ತಿಳಿಸಿದ್ದಾರೆ.

ಮಾಸಿಕ ಪಾಸ್ ವ್ಯರ್ಥ:

ಸರ್ಕಾರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯಿಂದ ನೀಡುವ ಮಾಸಿಕ ಪಾಸ್​ಗಳನ್ನು ಬಳಸಿ ಶಾಲಾ - ಕಾಲೇಜಿಗೆ ತೆರಳುತ್ತಾರೆ. ಆದರೆ, ಬಸ್ ಅಭಾವ ಇರುವುದರಿಂದ ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳು ತೆರಳಲು ಸಾಧ್ಯವಾಗದೇ ಖಾಸಗಿ ವಾಹನಗಳನ್ನು ಹಿಡಿದು ಹಣ ಕೊಟ್ಟು ತೆರಳಬೇಕಾಗಿದೆ ಎಂದು ದೂರಿದ್ದಾರೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಹೇಳಿಕೆ ದಾಖಲಿಸಿಕೊಂಡ ಎಸ್ಐಟಿ

ಇನ್ನೂ ಮುಂದಾದರು ಪ್ರಯೋಜನಕ್ಕೆ ಬೇಕಾದ ಬಸ್ ನಿಯೋಜನೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು‌ ಎಚ್ಚರಿಸಿದ್ದಾರೆ. ಇಲ್ಲಿನ ಡಿಪೋ ಮ್ಯಾನೇಜರ್​ಗೆ ಕರೆ ಮಾಡಿದ ಗ್ರಾಮಸ್ಥರು, ದೂರು‌ ನೀಡಿ ತರಾಟೆಗೆ ತೆಗೆದುಕೊಂಡಿದ್ದು, ಸಮಸ್ಯೆ ಬಗೆಹರಿಸುವುದಾಗಿ ಇಲಾಖೆಯ ಸಿಬ್ಬಂದಿಯೊಬ್ಬರನ್ನು ಕಳುಹಿಸಿ ಪರಿಸ್ಥಿತಿ ತಿಳಿಗೊಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.