ಚಾಮರಾಜನಗರ: ಶಾಸಕ ಎನ್ ಮಹೇಶ್ ಜೊತೆಗೆ ಗುರುತಿಸಿಕೊಂಡು ಅನರ್ಹಗೊಂಡಿದ್ದ 7 ಮಂದಿ ನಗರಸಭೆ ಸದಸ್ಯರಲ್ಲಿ 6 ಮಂದಿ ಜಯಭೇರಿ ಬಾರಿಸಿದ್ದು ಶಾಸಕರ ಪ್ರತಿಷ್ಠೆಗೆ ಜಯಮಾಲೆ ದಕ್ಕಿದೆ.
ಕೊಳ್ಳೇಗಾಲ ನಗರಸಭೆಯ 7 ವಾರ್ಡ್‌ಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, 7 ಮಂದಿ ಅನರ್ಹರಲ್ಲಿ 6 ಮಂದಿ ಗೆಲ್ಲುವ ಮೂಲಕ ಶಾಸಕ ಎನ್.ಮಹೇಶ್ ಕ್ಷೇತ್ರದಲ್ಲಿ ಹಿಡಿತ ಬಿಗಿಗೊಳಿಸಿದ್ದು, ವಿರೋಧಿ ಗುಂಪುಗಳಿಗೆ ತಕ್ಕ ತಿರುಗೇಟು ಕೊಟ್ಟಿದ್ದಾರೆ.
2ನೇ ವಾರ್ಡ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭಾಗ್ಯ ಗೆಲುವು ಸಾಧಿಸಿದ್ದು, ಉಳಿದ 6 ಕ್ಷೇತ್ರಗಳಲ್ಲಿನ ಕಮಲಕಲಿಗಳಾದ 21ನೇ ವಾರ್ಡ್- ಪ್ರಕಾಶ್, 6 ನೇ ವಾರ್ಡಿನ ಮಾನಸ, 25 ನೇ ವಾರ್ಡಿನ ರಾಮಕೃಷ್ಣ, 7ನೇ ವಾರ್ಡ್ ನಾಸಿರ್ ಷರೀಫ್, 13 ನೇ ವಾರ್ಡಿನ ಪವಿತ್ರಾ ಹಾಗೂ 26ನೇ ವಾರ್ಡಿನ ನಾಗಸುಂದ್ರಮ್ಮ ವಿಜಯ ಸಾಧಿಸಿದ್ದಾರೆ.
ಇದನ್ನೂ ಓದಿ: ಕೆಜಿಗಟ್ಟಲೇ ಬೆಳ್ಳಿ, ಮುತ್ತಿನಹಾರ.. ನಗರಸಭೆ, ಗ್ರಾ.ಪಂ ಸದಸ್ಯರಿಗೆ ಸಚಿವ ಆನಂದ ಸಿಂಗ್ ಭರ್ಜರಿ ಗಿಫ್ಟ್?
ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದು ಕಾಂಗ್ರೆಸ್ ಒಂದು ಸ್ಥಾನಕ್ಕಷ್ಟೇ ಸೀಮಿತಗೊಂಡಿದೆ. ಈ ಹಿಂದೆ 7 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದ ಬಿಎಸ್ಪಿ ಈ ಬಾರಿ ಮುಖಭಂಗ ಅನುಭವಿಸಿದೆ.
ಬಿಎಸ್ಪಿಯಿಂದ ಉಚ್ಚಾಟನೆ: ಎನ್.ಮಹೇಶ್ ಬಿಜೆಪಿ ಸೇರಿದ್ದ ವೇಳೆ ವಿಪ್ ಉಲ್ಲಂಘಿಸಿದ ಹಿನ್ನೆಲೆ ನಗರಸಭಾಧ್ಯಕ್ಷರ ಚುನಾವಣೆಯಲ್ಲಿ 7 ಮಂದಿ ಬಿಎಸ್ಪಿ ಸದಸ್ಯರು ಅನರ್ಹಗೊಂಡಿದ್ದರು. ಅನರ್ಹಗೊಂಡ ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಎಲ್ಲ 7 ಮಂದಿಗೂ ಬಿಜೆಪಿ ಟಿಕೆಟ್ ಕೊಡಿಸಿ 6 ಮಂದಿಯನ್ನು ಗೆಲಿಸುವಲ್ಲಿ ಶಾಸಕ ಎನ್ ಮಹೇಶ್ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಅರಸೀಕೆರೆ ನಗರಸಭೆ 7 ವಾರ್ಡ್ಗಳ ಉಪಚುನಾವಣೆ: ಹೈಕೋರ್ಟ್ ತಾತ್ಕಾಲಿಕ ತಡೆ