ETV Bharat / state

ಕೊಳ್ಳೇಗಾಲ: ಕಾಡಿನೊಳಗೆ ಗುಂಡು ಪಾರ್ಟಿ, ದಂಡದ ರುಚಿ ತೋರಿಸಿದ ಅರಣ್ಯಾಧಿಕಾರಿಗಳು - Kollegala Chamrajnagara latest news

ಮಲೆ ಮಹದೇಶ್ವರ ವನ್ಯ ಜೀವಿ ವಿಭಾಗದ ಉಡುತೊರೆಹಳ್ಳಿಯ ಜಲಾಶಯದ ಬಳಿ ಅರಣ್ಯದ ಗಡಿಯಲ್ಲಿ ಮೂವರು ಗುಂಡು ಪಾರ್ಟಿ ಆಯೋಜಿಸಿದ್ದರು. ಆ ಮೂವರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ದಂಡದ ಬಿಸಿ ಮುಟ್ಟಿಸಿ, ಎಚ್ಚರಿಕೆ ನೀಡಿದ್ದಾರೆ.

Drinks party in forest area
Drinks party in forest area
author img

By

Published : Aug 25, 2020, 7:57 PM IST

ಕೊಳ್ಳೇಗಾಲ: ಕಾಡಿನೊಳಗೆ ಮದ್ಯ ಸೇವನೆ ಮಾಡುತ್ತಿದ್ದ ಮೂವರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ದಂಡದ ಹಾಕಿ, ಎಚ್ಚರಿಕೆ ನೀಡಿರುವ ಘಟನೆ ಮಲೆ ಮಹದೇಶ್ವರ ವನ್ಯ ಜೀವಿ ವಿಭಾಗ ವ್ಯಾಪ್ತಿಯಲ್ಲಿ ನಡೆದಿದೆ.

ಮಲೆ ಮಹದೇಶ್ವರ ವನ್ಯ ಜೀವಿ ವಿಭಾಗದ ಉಡುತೊರೆಹಳ್ಳಿಯ ಜಲಾಶಯದ ಬಳಿ ಅರಣ್ಯದ ಗಡಿಯಲ್ಲಿ ಮೂವರು ಗುಂಡು ಪಾರ್ಟಿ ಆಯೋಜಿಸಿದ್ದರು. ಆ ಮೂವರು ಅರಣ್ಯ ಅಧಿಕಾರಿಗಳ ಕಣ್ಣಿಗೆ ಸಿಕ್ಕಿಬಿದ್ದಿದ್ದು, ದಂಡ ಕಟ್ಟಿದ್ದಾರೆ.

ಕಾಂಚಳ್ಳಿ ಗ್ರಾಮದ ಮಹೇಶ್ (25), ರಮೇಶ್ (28), ನಾಗ (26) ಈ ಮೂವರು ಮದ್ಯ ಸೇವಿಸುವಾಗ ಸಿಕ್ಕಿ ಬಿದ್ದ ಆರೋಪಿಗಳು. ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಆದೇಶದ ಮೇರೆಗೆ ಆ ಮೂವರಿಗೆ ತಲಾ 1 ಸಾವಿರ ರೂ. ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.