ETV Bharat / state

ಅಕ್ರಮ ಪಡಿತರ ಸಾಗಣೆ ಆರೋಪ: ಕೊಳ್ಳೇಗಾಲದಲ್ಲಿ ಇಬ್ಬರ ಬಂಧನ - ಕೊಳ್ಳೇಗಾಲ ಚಾಮರಾಜನಗರ ಲೆಟೆಸ್ಟ್ ನ್ಯೂಸ್

ತಾಲೂಕಿನ ಸುತ್ತ-ಮುತ್ತಲ ಗ್ರಾಮಗಳಲ್ಲಿ ಜನರಿಂದ ಪಡಿತರವನ್ನು ಖರೀದಿ ಮಾಡಿ, ಟಿ.ನರಸೀಪುರಕ್ಕೆ ಮಾರಾಟ ಮಾಡಲು ಸಾಗಣೆ ಮಾಡುವ ವೇಳೆ ಕುಂತೂರು ಕಾರ್ಖಾನೆಯ ಅಡ್ಡರಸ್ತೆಯಲ್ಲಿ ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

Illegal ration transport
Illegal ration transport
author img

By

Published : Jun 30, 2020, 8:07 PM IST

ಕೊಳ್ಳೇಗಾಲ: ಪಡಿತರ‌ ಅಕ್ಕಿಯನ್ನು ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿದ್ದು, ಸಾಗಣೆಗೆ ಬಳಸಿದ್ದ ಗೂಡ್ಸ್ ಆಟೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತಾಲೂಕಿನ ಟಗರಪುರ ಗ್ರಾಮದ ಶಿವಣ್ಣ (49), ಚಾಲಕ ಪಾಪಣ್ಣ (39)ಬಂಧಿತ ಆರೋಪಿಗಳು. ಇವರಿಂದ ಸುಮಾರು 626 ಕೆ.ಜಿ ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ತಾಲೂಕಿನ ಸುತ್ತ-ಮುತ್ತಲ ಗ್ರಾಮಗಳಲ್ಲಿ ಜನರಿಂದ ಪಡಿತರವನ್ನು ಖರೀದಿ ಮಾಡಿ, ಟಿ.ನರಸೀಪುರಕ್ಕೆ ಮಾರಾಟ ಮಾಡಲು ಸಾಗಣೆ ಮಾಡುವ ವೇಳೆ ಕುಂತೂರು ಕಾರ್ಖಾನೆಯ ಅಡ್ಡರಸ್ತೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವೃತ್ತ ನಿರೀಕ್ಷಕ ಶ್ರೀಕಾಂತ್ ನೇತ್ರತ್ವದಲ್ಲಿ ಕಾರ್ಯಚರಣೆ ಜರಗಿದ್ದು, ಎಸ್.ಐ ಅಶೋಕ್ ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.