ಕೊಳ್ಳೇಗಾಲ: ಬಿಜೆಪಿ ಸದಸ್ಯರ ಜೊತೆ ಮೈತ್ರಿ ಮಾಡಿಕೊಂಡು ಪ್ರತಿಷ್ಟೆ ಕಣವಾಗಿದ್ದ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಎದುರಿಸಿ ಗೆದ್ದಿದ್ದೇನೆ ಎಂದು ಶಾಸಕ ಎನ್.ಮಹೇಶ್ ತಿಳಿಸಿದರು.
ಕೊಳ್ಳೇಗಾಲ ಸ್ಥಳೀಯ ಶಾಸಕನಾಗಿ ಅಧಿಕಾರದಲ್ಲಿರುವ ನನಗೆ ನನ್ನ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವುದು ಅನಿವಾರ್ಯ ಹಾಗೂ ಸವಾಲಾಗಿತ್ತು. ಈ ಹಿನ್ನಲೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿದ್ದೇನೆ.
ಕೊರೊನಾ ಸಮಯವಾಗಿರುವುದರಿಂದ ರಾಜ್ಯ ಸರ್ಕಾರ ಆರ್ಥಿಕ ಮುಗಟ್ಟು ಎದುರಿಸುತ್ತಿದ್ದು, ಇದರ ನಡುವೆ ಕೊಳ್ಳೇಗಾಲದಲ್ಲಿ ನೆನೆಗುದ್ದಿಗೆ ಬಿದ್ದಿರುವ ಕಾಮಗಾರಿಗಳನ್ನು ಮುಗಿಸಲು ನಿರ್ಧರಿಸಿದ್ದೇನೆ. ಈ ಕಾರ್ಯಕ್ಕೆ ಮುಖ್ಯಮಂತ್ರಿಗಳ ಜೊತೆ ಮಾತನಾಡಲು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ನನಗೆ ಸಾಥ್ ನೀಡಲಿದ್ದಾರೆ ಎಂದರು.