ETV Bharat / state

ಕುಡಿದ ಅಮಲಿನಲ್ಲಿ ಪತ್ನಿ ಕೊಲೆ: ನೇಣು ಹಾಕಿ ಆತ್ಮಹತ್ಯೆ ಎಂದು ಪತಿ ಹೈಡ್ರಾಮ - ಚಾಮರಾಜನಗರ ಸುದ್ದಿ

ಕ್ಷುಲ್ಲಕ ಕಾರಣಕ್ಕೆ ಆಗಾಗ ಗಲಾಟೆ ಮಾಡುತ್ತಿದ್ದ ಪತಿಯೊಬ್ಬ, ಕುಡಿದು ಬಂದು ಪತ್ನಿಯನ್ನು ಕೊಂದು ನೇಣು ಹಾಕಿರುವ ಆರೋಪ ಕೇಳಿ ಬಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

husband who killed and hanged his wife in chamarajnagar
ಕುಡಿದ ಅಮಲಿನಲ್ಲಿ ಪತ್ನಿ ಕೊಲೆ: ನೇಣು ಹಾಕಿ ಆತ್ಮಹತ್ಯೆ ಎಂದು ಪತಿ ಹೈಡ್ರಾಮ
author img

By

Published : Nov 16, 2021, 10:55 AM IST

ಚಾಮರಾಜನಗರ: ಕುಡಿದ ಅಮಲಿನಲ್ಲಿ ಪತ್ನಿಯನ್ನು ಕೊಂದು ನೇಣು ಹಾಕಿದ ಪತಿ, ಆತ್ಮಹತ್ಯೆಯ ಕತೆ ಕಟ್ಟಿರುವ ಆರೋಪ ಚಾಮರಾಜನಗರದ ಹನೂರಿನ ತಾಲೂಕಿನ ಆರ್.ದೊಡ್ಡಿ ಗ್ರಾಮದಲ್ಲಿ ಕೇಳಿ ಬಂದಿದೆ.

ಜ್ಯೋತಿ (26) ಮೃತಪಟ್ಟ ದುರ್ದೈವಿಯಾಗಿದ್ದು, ಜ್ಯೋತಿಯ ಪತ್ನಿ ರಾಜೇಶ​​ನನ್ನು ಕೊಲೆ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಆರ್.ಎಸ್ ದೊಡ್ಡಿ ಗ್ರಾಮದ ಈತ ಕಳೆದ 5 ವರ್ಷದ ಹಿಂದೆ ತನ್ನ ಸಂಬಂಧಿಯಾದ ಜ್ಯೋತಿ ಎಂಬಾಕೆಯನ್ನು ಪ್ರೀತಿಸಿ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದರು.

ಮದುವೆಯಾದ 2 ವರ್ಷದ ಬಳಿಕ ಕುಡಿತದ ಚಟಕ್ಕೆ ಒಳಗಾದ ಆತ ಕ್ಷುಲ್ಲಕ ಕಾರಣಕ್ಕೆ ಆಗಾಗ ಪತ್ನಿ ಮೇಲೆ ಗಲಾಟೆ ಮಾಡುತ್ತಿದ್ದು, ಹಲ್ಲೆ ಮಾಡುತ್ತಿದ್ದ ಎನ್ನಲಾಗಿದೆ. ತಡರಾತ್ರಿ ಕುಡಿದ ಬಂದು ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರಿಂದ ಜ್ಯೋತಿ ಮೃತಪಟ್ಟಿದ್ದು, ಇದರಿಂದ ಭಯಭೀತಗೊಂಡ ರಾಜೇಶ್ ಆಕೆಯನ್ನು ನೇಣು ಬಿಗಿದು ಸಾವಿನ ಸುದ್ದಿಯ ಬಗ್ಗೆ ಅಕ್ಕಪಕ್ಕದ ಮನೆಯವರಿಗೆ ಸುದ್ದಿ ತಿಳಿಸಿದ್ದಾನೆ ಎನ್ನಲಾಗಿದೆ.

ಪತಿಯೇ ಜ್ಯೋತಿಯನ್ನು ಕೊಂದಿದ್ದಾನೆ ಎಂದು ಮೃತಳ ಸಂಬಂಧಿಕರು ದೂರು ನೀಡಿದ ಮೇರೆಗೆ ಆರೋಪಿ ಬಂಧಿಸಲಾಗಿದ್ದು, ಹನೂರು ಪೊಲೀಸ್ ಠಾಣೆಯಲ್ಲಿ (Hanuru police station) ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: BSC ವಿದ್ಯಾರ್ಥಿ - ವಿದ್ಯಾರ್ಥಿನಿ ಮೇಲೆ ನೈತಿಕ ಪೊಲೀಸ್ ಗಿರಿ: 6 ಮಂದಿ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.