ಕೊಳ್ಳೇಗಾಲ: ಪತಿಯೇ ಪತ್ನಿಗೆ ಇಲಿ ಪಾಷಾಣವನ್ನು ಆಹಾರದಲ್ಲಿ ಮಿಶ್ರಿಣ ಮಾಡಿ ತಿನ್ನಿಸಿರುವ ಅಮಾನವೀಯ ಘಟನೆ ಪಟ್ಟಣದ ದೊಡ್ಡನಾಯಕರ ಬಡಾವಣೆಯಲ್ಲಿ ನಡೆದಿದೆ.
ರೇಖಾ (35) ಅಸ್ವಸ್ಥಗೊಂಡು ಆಸ್ಪತ್ರೆ ದಾಖಲಾಗಿರುವ ಗೃಹಿಣಿ. ಇವರು ಆಶಾ ಕಾರ್ಯಕರ್ತೆಯಾಗಿದ್ದು, ದುಡಿಮೆಯಿಂದ ಬಂದ ಹಣದಲ್ಲೇ ಜೀವನ ನಡೆಸುತ್ತಿದ್ದರು.
ಈಕೆಯ ಪತಿ ಶ್ರೀನಿವಾಸ್ ಕುಡಿತದ ದಾಸನಾಗಿದ್ದು, ಆಕೆಯೊಂದಿಗೆ ಜಗಳವಾಡಿದ್ದಾನೆ. ರೇಖಾ ಅವರಿಗೆ ಕೆಲಸ ಬಿಡು, ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಬಳಿಕ ವಿಷ ಮಿಶ್ರಿತ ಆಹಾರವನ್ನು ತಿನ್ನಿಸಿ ಕೌರ್ಯ ಮೆರೆದಿದ್ದಾನೆ.
ವಿಷಯ ತಿಳಿದ ಕೂಡಲೇ ರೇಖಾ ಅವರನ್ನು ಸಂಬಂಧಿಕರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಪತಿ ಶ್ರೀನಿವಾಸ್ ವಿರುದ್ಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ.
ಇದನ್ನೂ ಓದಿ: ರಾಜಕಾಲುವೆ ಬಳಿ ದೊರೆತಿದ್ದ ಶವದ ಗುರುತು ಪತ್ತೆ ಹಚ್ಚಿದ ಪೊಲೀಸರು