ETV Bharat / state

ಕೊಳ್ಳೇಗಾಲದಲ್ಲಿ ಕಾಡು ಪ್ರಾಣಿಗಳ ಬೇಟೆಗೆ ಹೊಂಚು: 4 ನಾಡ ಬಂದೂಕಿನೊಂದಿಗೆ ಐವರ ಬಂಧನ - ಕೊಳ್ಳೇಗಾಲ ಲೇಟೆಸ್ಟ್​ ಅಪ್ಡೇಟ್​ ನ್ಯೂಸ್​

ಕೊಳ್ಳೇಗಾಲ ತಾಲೂಕಲ್ಲಿ ಕಾಡು ಪ್ರಾಣಿಗಳ ಬೇಟೆಗೆ ಹೊಂಚು ಹಾಕಿದ್ದ ಖದೀಮರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. 5 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ನಾಲ್ಕು ನಾಡ ಬಂದೂಕುಗಳನ್ನು ವಶಕ್ಕೆ ಪಡೆದಿದ್ದಾರೆ.

5 persons arrest in kollegal
ಕಾಡು ಪ್ರಾಣಿಗಳ ಬೇಟೆಗೆ ಹೊಂಚು:5 ಮಂದಿಯ ಬಂಧನ
author img

By

Published : Nov 3, 2020, 7:22 AM IST

ಕೊಳ್ಳೇಗಾಲ(ಚಾಮರಾಜನಗರ): ತಾಲೂಕಿನ ಜಾಗೇರಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳನ್ನು ಅಕ್ರಮವಾಗಿ ಬೇಟೆಯಾಡಲು ಸಂಗ್ರಹಿಸಿದ್ದ 4 ನಾಡ ಬಂದೂಕುಗಳನ್ನು ವಶಪಡಿಸಿಕೊಂಡಿದ್ದು, 5 ಮಂದಿ ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಜಾಗೇರಿ ಗ್ರಾಮದ ಶಾಂತಿ ನಗರ ಬಡಾವಣೆಯ ಜಾನ್‍ಜೋಸ್ಸನ್, ಜಾನ್‍ಬಾಸ್ಕೋ, ಅಂಥೋಣಿ, ಹೇಮಂತ್‍ ಸ್ಟಾಲಿನ್, ಭಾಗ್ಯರಾಜು ಬಂಧಿತ ಆರೋಪಿಗಳು. ಇನ್ನಿಬ್ಬರು ಆರೋಪಿಗಳಾದ ಅಂಥೋಣಿ ರಾಜ್ ಮತ್ತು ಸೇಸುರಾಜ್ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಇವರು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಾಡು ಪ್ರಾಣಿಗಳನ್ನು ಬೇಟೆಯಾಡಲು ತೋಟದ ಮನೆಗಳಲ್ಲಿ ಅಕ್ರಮ ನಾಡ ಬಂದೂಕುಗಳನ್ನು ಸಂಗ್ರಹಿಸಿದ್ದಾರೆ ಎಂಬ ‌ಖಚಿತ ಮಾಹಿತಿ ಮೇರೆಗೆ ಸಿಪಿಐ ಶ್ರೀಕಾಂತ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಅಕ್ರಮ ವಸ್ತುಗಳ ಸಮೇತ ಬಂಧಿಸಿದ್ದಾರೆ. ಸದ್ಯ ಆರೋಪಿಗಳ ಹೆಚ್ಚಿನ ತನಿಖೆಗಾಗಿ ಪೊಲೀಸ್ ಇಲಾಖೆ ಮುಂದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.