ETV Bharat / state

ಚಾಮರಾಜನಗರದಲ್ಲಿ ಭಾರೀ ಮಳೆ... ಸಂಚಾರ ಅಸ್ತವ್ಯಸ್ತ, ನೆಲಕಚ್ಚಿದ ಬಾಳೆ-ತೆಂಗು - Heavy Rain fall in chamarajanagara

ತಾಲೂಕಿನ ಕೋಡಿಮೋಳೆ ಗ್ರಾಮದಲ್ಲಿ ಸುರಿದ ಆಲಿಕಲ್ಲು ಮಳೆಯಿಂದಾಗಿ ರಸ್ತೆಯ ಎರಡೂ ಬದಿ ಹಿಮರಾಶಿಯಂತೆ ಭಾಸವಾಗುತ್ತಿತ್ತು. ಕೇವಲ ಮಕ್ಕಳಷ್ಟೇ ಅಲ್ಲದೆ ಯುವಕರು ಕೂಡ ಆಲಿಕಲ್ಲು ಹಿಡಿದು, ತಿಂದು ಸಂತಸಪಟ್ಟರು.‌

heavy-rain-in-chamarajanagara
3 ತಿಂಗಳ ಬಳಿಕ ಚಾಮರಾಜನಗರದಲ್ಲಿ ಭಾರೀ ಮಳೆ
author img

By

Published : Feb 19, 2021, 8:39 PM IST

ಚಾಮರಾಜನಗರ: ಮೂರು ತಿಂಗಳ ಬಳಿಕ ಜಿಲ್ಲೆಯ ವಿವಿಧೆಡೆ ಒಂದೂವರೆ ತಾಸು ಭರ್ಜರಿ ಮಳೆಯಾಗಿದ್ದು, ಕೆಲವು ಗ್ರಾಮಗಳಲ್ಲಿ ಆಲಿಕಲ್ಲಿನ ರಾಶಿಯೇ ಸುರಿದಿದೆ.

ಸಂಜೆ 4ರ ವೇಳೆಗೆ ಆರಂಭವಾದ ಗಾಳಿ ಹಾಗೂ ಗುಡುಗು ಸಹಿತ ಭಾರೀ ಮಳೆ ಸುಮಾರು 5.30ರವರೆಗೂ ಸುರಿದು ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಭೂಮಿಗೆ ತಂಪೆರೆಯಿತು. ಮೂರು ತಿಂಗಳ ಬಳಿಕ ಜಿಲ್ಲೆಯಲ್ಲಿ ಇಂದು ಸುರಿದ ಆಲಿಕಲ್ಲು ಮಳೆ ಸಂತಸ, ಸಂಚಾರ ಅಸ್ತವ್ಯಸ್ತತೆಗೆ ಕಾರಣವಾಯಿತು.

3 ತಿಂಗಳ ಬಳಿಕ ಚಾಮರಾಜನಗರದಲ್ಲಿ ಭಾರೀ ಮಳೆ

ತಾಲೂಕಿನ ಕೋಡಿಮೋಳೆ ಗ್ರಾಮದಲ್ಲಿ ಸುರಿದ ಆಲಿಕಲ್ಲು ಮಳೆಯಿಂದಾಗಿ ರಸ್ತೆಯ ಎರಡೂ ಬದಿ ಹಿಮರಾಶಿಯಂತೆ ಭಾಸವಾಗುತ್ತಿತ್ತು. ಕೇವಲ ಮಕ್ಕಳಷ್ಟೇ ಅಲ್ಲದೆ ಯುವಕರು ಕೂಡ ಆಲಿಕಲ್ಲು ಹಿಡಿದು, ತಿಂದು ಸಂತಸಪಟ್ಟರು.‌

ಓದಿ: ತರಕಾರಿ ದರದ ಮೇಲೆ ಇಂಧನ ಬೆಲೆ ಎಫೆಕ್ಟ್​​; ಗಗನಕ್ಕೇರಿದ ದರದಿಂದ ಹೈರಾಣಾದ ಜನತೆ!

ಬಸವೇಶ್ವರ ಥಿಯೇಟರ್, ಭುವನೇಶ್ವರಿ ವೃತ್ತದ ರಸ್ತೆ ತುಂಬೆಲ್ಲಾ ನೀರು ನಿಂತಿದ್ದರಿಂದ ವಾಹನ ಸವಾರರು, ಪಾದಚಾರಿಗಳು ಸಂಚರಿಸಲು ಹರಸಾಹಸಪಟ್ಟರು. ಜಿಲ್ಲೆಯ ಹಲವು ಗ್ರಾಮಗಳಲ್ಲಿ ಬಾಳೆ ಬೆಳೆ ಸಂಪೂರ್ಣ ನೆಲಕಚ್ಚಿ ಅಪಾರ ಪ್ರಮಾಣದ ಹಾನಿಯಾಗಿದೆ. ಚಂದಕವಾಡಿ ಹೋಬಳಿಯ ಪುತ್ತನಪುರ ಗ್ರಾಮದಲ್ಲಿ ದಯಾನಿಧಿ ಎಂಬುವವರಿಗೆ ಸೇರಿದ ಭರಪೂರ ಫಲ ನೀಡುತ್ತಿದ್ದ 7-8 ತೆಂಗಿನಮರಗಳು ಮುರಿದು ಬಿದ್ದಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.