ETV Bharat / state

ಚಾಮರಾಜನಗರದಲ್ಲಿ ಮಳೆ: ಶಾಲಾ ಕಾಲೇಜುಗಳಿಗೆ ರಜೆ, ಜನಜೀವನ ಅಸ್ತವ್ಯಸ್ತ - ಬಿಳಿಗಿರಿರಂಗನ ಬೆಟ್ಟದ ಗಿರಿ ಶ್ರೇಣಿ

ರಾತ್ರಿಯಿಂದ ಆರಂಭವಾದ ಮಳೆಗೆ ರಸ್ತೆಗಳು ನದಿಯಂತಾಗಿದೆ. ಜನಜೀವನ ಅಸ್ತವ್ಯಸ್ತವಾಗಿದ್ದು, ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

heavy-rain-in-chamarajanagar
ಚಾಮರಾಜನಗರದಲ್ಲಿ ಮಳೆ
author img

By

Published : Aug 29, 2022, 10:55 AM IST

ಚಾಮರಾಜನಗರ: ಭಾನುವಾರ ರಾತ್ರಿಯಿಂದ ಆರಂಭಗೊಂಡ ಮಳೆ ಜಿಲ್ಲೆಯ ಬಹುತೇಕ ಕಡೆ ಒಂದೇ ಸಮನೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಳೆ ಬಿಡುವು ಕೊಡದ ಹಿನ್ನೆಲೆಯಲ್ಲಿ ಸೋಮವಾರ 1ನೇ ತರಗತಿಯಿಂದ ಪದವಿ ಕಾಲೇಜಿನವರೆಗೆ ಡಿಸಿ ಚಾರುಲತಾ ಸೋಮಲ್ ರಜೆ ಘೋಷಿಸಿದ್ದಾರೆ.

ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಗಿರಿ ಶ್ರೇಣಿಯ ಶೇಣಿ ತಪ್ಪಲಲ್ಲಿರುವ ಗುಂಬಳ್ಳಿ ಗ್ರಾಮದ ಕೃಷ್ಣನಯ್ಯ ಕಟ್ಟೆ ಚೆಕ್ ಡ್ಯಾಮ್ 20 ವರ್ಷಗಳ ನಂತರ ತುಂಬಿ ಕೋಡಿ ಬಿದ್ದಿದ್ದು ಜನರು ಮಳೆಯನ್ನೂ ಲೆಕ್ಕಿಸದೇ ಕೋಡಿ ನೋಡಲು ಮುಗಿಬಿದ್ದಿದ್ದಾರೆ.

ಶಾಲಾ ಕಾಲೇಜಿಗೆ ರಜೆ, ಜನಜೀವನ ಅಸ್ತವ್ಯಸ್ತ

ವಿವಾಹ ಸಮಾರಂಭಕ್ಕೆ ಮಳೆ ಅಡ್ಡಿ : ನಗರದ ಕಲ್ಯಾಣ ಮಂಟಪದ ಭೋಜನಾಲಯಕ್ಕೆ ಮಳೆ ನೀರು ನುಗ್ಗಿ ಸಮಾರಂಭಕ್ಕೆ ಅಡ್ಡಿಪಡಿಸಿದೆ‌. ಊಟ ಮಾಡುವ ವೇಳೆ ಭೋಜನಾಲಯ, ಅಡುಗೆ ಕೋಣೆಗೆ ನೀರು ನುಗ್ಗಿ ಫಜೀತಿ ಉಂಟು ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಚಾಮರಾಜನಗರ ಜೋಡಿ ರಸ್ತೆ, ಅಂಗಡಿ ಬೀದಿಗಳಲ್ಲಿ ಸಂತೇಮರಹಳ್ಳಿ ಸಮೀಪದ ಕಮರವಾಡಿ ಗೇಟ್ ರಾಜ್ಯ ಹೆದ್ದಾರಿಯಲ್ಲಿ, ಸತ್ಯಮಂಗಲಂ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನದಿಯಂತೆ ಹರಿಯುತ್ತಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ.

ಇದನ್ನೂ ಓದಿ : ರಾಮನಗರದಲ್ಲಿ ಭಾರಿ ಮಳೆ.. ಜನ ಜೀವನ ಅಸ್ತವ್ಯಸ್ತ, ಶಾಲೆಗಳಿಗೆ ರಜೆ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.