ಚಾಮರಾಜನಗರ: ಲಾಕ್ಡೌನ್ನಿಂದಾಗಿ ಪಡಿತರ ಬಿಟ್ಟು ಇನ್ನಿತರ ವಸ್ತುಗಳಿಗೆ ಆದಿವಾಸಿಗಳು ಪರದಾಡುತ್ತಿದ್ದನ್ನು ಗಮನಿಸಿದ ಮಾಜಿ ಸಂಸದ ಆರ್.ದ್ರುವನಾರಾಯಣ, ದಿನನಿತ್ಯದ ಬಳಕೆಗೆ ಬೇಕಾಗುವ ವಸ್ತುಗಳನ್ನು ವಿತರಿಸಿದರು.
ಬಿಳಿಗಿರಿರಂಗನ ಬೆಟ್ಟದ ತಪ್ಪಲಿನ 10ಕ್ಕೂ ಹೆಚ್ಚು ಊರುಗಳ ಜನರಿಗೆ ಮನೆ ಬಾಗಿಲಿಗೆ ತೆರಳಿ ಕೂಲಿ ಇಲ್ಲದೆ ಪರದಾಡುತ್ತಿದ್ದ ಆದಿವಾಸಿಗಳ ಹಸಿವು ನೀಗಿಸಲು 800 ಆಹಾರ ಪದಾರ್ಥಗಳ ಕಿಟ್ ವಿತರಿಸಿದರು.
ನೆಲ್ಲಿಕಾಯಿ, ಅಂಟುವಾಳ, ಸೀಗೆಕಾಯಿ, ಜೇನುತುಪ್ಪ, ಮಾಗಳಿ ಬೇರು, ಪಾಚಿ ಸೇರಿದಂತೆ ಇನ್ನಿತರ ಕಾಡು ಉತ್ಪನ್ನಗಳಿಂದ ಆದಿವಾಸಿಗಳು ಜೀವನ ಸಾಗುಸುತ್ತಿದ್ದರು. ಆದರೆ, ಲಾಕ್ಡೌನಿಂದಾಗಿ ಅಗತ್ಯ ವಸ್ತುಗಳಿಗೆ ಪರಿತಪಿಸುತ್ತಿದ್ದನ್ನು ಅರಿತು ಆಹಾರ ಪದಾರ್ಥಗಳ ಕಿಟ್ ವಿತರಿಸಿದರು. ಡಿಸಿಸಿ ಅಧ್ಯಕ್ಷ ಮರಿಸ್ವಾಮಿ, ಮಾಜಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ ಹಾಗೂ ಬಾಲರಾಜು, ಸ್ಥಳೀಯ ಮುಖಂಡೆ ಕೇತಮ್ಮ ಇನ್ನಿತರರು ಇದ್ದರು.
ಶಾಸಕ ಎನ್.ಮಹೇಶ್ ದಿನಸಿ ವಿತರಣೆ:
ಮಾಜಿ ಸಂಸದ ಆರ್.ಧ್ರುವನಾರಾಯಣ ಅಗತ್ಯ ಸಾಮಗ್ರಿ ವಿತರಿಸಿದ ಬೆನ್ನಲ್ಲೇ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಕೂಡಾ ಅಲ್ಲಿನ ನೂರಾರು ಕುಟುಂಬಗಳಿಗೆ ದಿನಸಿ ಪದಾರ್ಥ ವಿತರಿಸಿದರು.