ಚಾಮರಾಜನಗರ: ಕೊರೊನಾ ಆತಂಕ ಕಡಿಮೆಯಾಗಿ ಮಾಸ್ಕ್ ಇಲ್ಲದೇ ಬೇಕಾ ಬಿಟ್ಟಿಯಾಗಿ ತಿರುಗಾಡುತ್ತಿದ್ದ ಜನರಿಗೆ ಮತ್ತೇ ದಂಡ ಪ್ರಯೋಗ ಶುರುವಾಗಿದೆ.
ಚಾಮರಾಜನಗರ ನಗರಸಭೆ ಇಂದಿನಿಂದ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲು ಮುಂದಾಗಿದ್ದು, ಕಡ್ಡಾಯವಾಗಿ ಸಾಮಾಜಿಕ ಅಂತರ, ಮಾಸ್ಕ್ ಧಾರಣೆಯನ್ನು ಅಧಿಕಾರಿಗಳು ಬಿಗಿಗೊಳಿಸಿ ದಂಡ ಪ್ರಯೋಗದ ಎಚ್ಚರಿಕೆಯನ್ನು ಮತ್ತೆ ಶುರು ಮಾಡಿದ್ದಾರೆ.
ಓದಿ:ಸಂಕೇಶ್ವರ ಮೂಲಕ ರಾಜ್ಯ ಪ್ರವೇಶಿಸುತ್ತಿರುವ 'ಮಹಾ' ಜನ... ಗಡಿಭಾಗದ ಜನರಲ್ಲಿ ಕೋವಿಡ್ ಆತಂಕ
ಕೊರೊನಾ ಭೀತಿ ಕಡಿಮೆಯಾದಂತೆ ಜನ ಜೀವನ ಸಾಮಾನ್ಯವಾಗಿ ಮಾಸ್ಕ್ ಹಾಕಿಕೊಂಡವರನ್ನು ಹುಡುಕಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ರೂಪಾಂತರ ಕೊರೊನಾ ಕೇರಳದಲ್ಲಿ ಉಲ್ಬಣವಾಗಿರುವುದರಿಂದ ಜಿಲ್ಲಾಡಳಿತ ಅಲರ್ಟ್ ಆಗಿ ಮಾಸ್ಕ್, ಸಾಮಾಜಿಕ ಅಂತರ ಪಾಲನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಇಲ್ಲದಿದ್ದಲ್ಲಿ ದಂಡ ಫಿಕ್ಸ್ ಎಂಬ ಖಡಕ್ ಸೂಚನೆ ಕೊಟ್ಟಿದೆ.