ETV Bharat / state

ಕೊಳ್ಳೇಗಾಲ : ಸಿದ್ದೇಶ್ವರ ಬೆಟ್ಟದ ದೇವಾಲಯದ ಬಳಿ 2 ಗುಂಪುಗಳ ನಡುವೆ ಮಾರಾಮಾರಿ! - ಚಾಮರಾಜನಗರ ಲೇಟೆಸ್ಟ್ ನ್ಯೂಸ್

ತಾಲೂಕಿನ ಸಿದ್ದೇಶ್ವರ ಬೆಟ್ಟದ ದೇವಾಲಯದ ಬಳಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು, ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ..

fight between 2 groups at kollegala
ಸಿದ್ದೇಶ್ವರ ಬೆಟ್ಟದ ದೇವಾಲಯದ ಬಳಿ 2 ಗುಂಪುಗಳ ನಡುವೆ ಮಾರಾಮಾರಿ!
author img

By

Published : Nov 20, 2021, 7:41 PM IST

ಕೊಳ್ಳೇಗಾಲ : ತಾಲೂಕಿನ ಸಿದ್ದೇಶ್ವರ ಬೆಟ್ಟದ ದೇವಾಲಯದ ಪೂಜೆ ಸಲ್ಲಿಸುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ಹೊಂಡರಬಾಳು ಗ್ರಾಮದ ಗುರುಸ್ವಾಮಿ, ಸಿದ್ದಲಿಂಗಸ್ವಾಮಿ, ವಿಕಾಸ್, ಜಯಮ್ಮ ಹಾಗೂ ಮತ್ತೊಂದು ಗುಂಪಿನವರಾದ ಶಿವಕುಮಾರ್ ಅಲಿಯಾಸ್ ಅಪ್ಪು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಿದ್ದೇಶ್ವರ ಬೆಟ್ಟದ ದೇವಾಲಯದ ಬಳಿ 2 ಗುಂಪುಗಳ ನಡುವೆ ಮಾರಾಮಾರಿ!

ನಂಜುಂಡಸ್ವಾಮಿ ಎಂಬುವರ ಗುಂಪು ಏಕಾಏಕಿ ದೇವಾಲಯದ ಬೀಗ ಕೊಡಿ ಎಂದು ಅರ್ಚಕ ಗುರುಸ್ವಾಮಿ ಮತ್ತು ಸಿದ್ದಲಿಂಗಸ್ವಾಮಿ, ವಿಕಾಸ್ ಹಾಗೂ ಜಯಮ್ಮ ಎಂಬುವರಿಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ ಎಂದು ಅವರ ಸಂಬಂಧಿಕರಾದ ಶಿವಕುಮಾರ್ ಎಂಬುವರು ಆರೋಪಿಸಿದ್ದಾರೆ.

ಮತ್ತೊಂದು ಗುಂಪಿನ ಕುಮಾರ್ ಈ ಬಗ್ಗೆ ಮಾತನಾಡಿ, ದೇವಸ್ಥಾನದ ಬೀಗ ಕೇಳಿದ ವಿಚಾರಕ್ಕೆ ನಮ್ಮ ಮೇಲೆ ಹಲ್ಲೆ ನಡೆಸಿದ್ದು, ಶಿವಕುಮಾರ್(ಅಪ್ಪು) ಎಂಬುವನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಆರೋಪಿದ್ದಾರೆ.

ಇದನ್ನೂ ಓದಿ: ಮೋದಿ ರೀತಿಯ ನಾಯಕ ಬೇರೆ ಪಾರ್ಟಿಯಲ್ಲಿಲ್ಲ.. ಅವರಂಥ ಪಿಎಂ ಪ್ರಪಂಚದಲ್ಲಿಲ್ಲ: ಶೋಭಾ ಕರಂದ್ಲಾಜೆ

ಸದ್ಯ ಈ ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.