ETV Bharat / state

5 ಸಾವಿರ ಕುಟುಂಬಗಳಿಗೆ 25 ಟನ್​ ಅಕ್ಕಿ ವಿತರಣೆ: ಬಡವರ ಮನೆ ಸೇರಿದ ಮಾದಪ್ಪನ ಪ್ರಸಾದ! - ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ನ್ಯೂಸ್​

ಕೊರೊನಾ ಹಿನ್ನೆಲೆ ಅನೇಕರು ಆಹಾರಕ್ಕಾಗಿ ಕಷ್ಟ ಪಡುತ್ತಿದ್ದು, ಮಲೆ ಮಹದೇಶ್ವರ ದೇವಾಲಯಕ್ಕೆ ಭಕ್ತರು ನೀಡಿದ್ದ 25 ಟನ್ ಅಕ್ಕಿಯನ್ನು 5 ಸಾವಿರ ಕುಟುಂಬಗಳಿಗೆ ವಿತರಣೆ ಮಾಡಲಾಯಿತು.

ಚಾಮರಾಜನಗರದಲ್ಲಿ ಅಕ್ಕಿ ವಿತರಣೆ
ಚಾಮರಾಜನಗರದಲ್ಲಿ ಅಕ್ಕಿ ವಿತರಣೆ
author img

By

Published : Apr 19, 2020, 6:13 PM IST

ಚಾಮರಾಜನಗರ: ಕೊರೊನಾ ಭೀತಿಯಲ್ಲಿ ಕಾಡಂಚಿನ ಜನ ಜೀವನರ ದುಸ್ತರವಾಗುತ್ತಿರುವ ಹಿನ್ನೆಲೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ 5 ಸಾವಿರ ಕುಟುಂಬಗಳಿಗೆ ಉಚಿತ ಅಕ್ಕಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಚಾಮರಾಜನಗರದಲ್ಲಿ ಅಕ್ಕಿ ವಿತರಣೆ

ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರಕ್ಕೆ ದಾನಿಗಳು ನೀಡಿರುವ 25 ಟನ್ ಅಕ್ಕಿಯನ್ನು ಸಂಕಷ್ಟದ ಸಮಯದಲ್ಲಿ ಬಡವರಿಗೆ ಉಚಿತವಾಗಿ ಹಂಚಲು ಮುಂದಾಗಿದ್ದು, ಈ ವಿಶಿಷ್ಟ ಕಾರ್ಯಕ್ರಮಕ್ಕೆ ಸಚಿವ ಸುರೇಶ್ ಕುಮಾರ್, ಗೋಪಿನಾಥಂ, ಚಂಗಡಿ ಗ್ರಾಮಗಳಲ್ಲಿ ಪಡಿತರ ವಿತರಿಸಿದರು.

ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಗೋಪಿನಾಥಂ, ಮಾರ್ಟಳ್ಳಿ, ರಾಮಾಪುರ, ಪಡಿಸಲನತ್ತ ಸೇರಿದಂತೆ ಪ್ರತಿ ಕುಟುಂಬಕ್ಕೆ ಐದು ಕೆಜಿ ಅಕ್ಕಿ ಸೇರಿದಂತೆ ಆಹಾರ ಸಾಮಾಗ್ರಿ, ಡಬಲ್ ಲೇಯರ್ ಮಾಸ್ಕ್​​ಗಳನ್ನು ಪ್ರಾಧಿಕಾರ ನೀಡಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.